ಕೋಟ ಜ 28(Daijiworld News/MSP): ಕಳೆದ ವರ್ಷ ಜನವರಿ 26ರ ರಾತ್ರಿ ನಡೆದ ಅವಳಿ ಕೊಲೆಯಲ್ಲಿ ನಿಧನಗೊಂಡ ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಸ್ಮರಣಾರ್ಥ ಕೋಟದ ಕಾರಂತ ಥೀಂ ಪಾರ್ಕ್ನಲ್ಲಿ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇರ್ವರ ಭಾವಚಿತ್ರಕ್ಕೆ ಪುಷ್ಪ ನಮನಗೈದು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಕಳೆದ ವರ್ಷ ದೇಶದಲ್ಲೆಡೆ ಗಣರಾಜ್ಯೋತ್ಸವ ಆಚರಿಸುವ ಶುಭಘಳಿಗೆಯಲ್ಲಿ ಕೋಟದ ಜನಗೆ ಮಾತ್ರ ಸೂತಕದ ಮನೆಯಾಗಿತ್ತು.ಇಡೀ ವಿಶ್ವದಲ್ಲಿ ತನ್ನ ಸಾಹಿತ್ಯದ ಮೂಲಕ ಕಂಪನ್ನು ಪಸರಿಸಿದ ಕೋಟದ ಶಿವರಾಮ ಕಾರಂತರ ಹುಟ್ಟೂರೆಂಬುವುದು ಅವಳಿ ಕೊಲೆಯ ಊರಾಗಿಸಿದರು. ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ ಬೆಳೆದ ಊರಿನ್ನು ಕೆಲವು ಕಿಡಿಗೇಡಿಗಳ ಕೃತ್ಯದಿಂದ ಸ್ಮಶಾನ ಮೌನವಾಗಿಸಿದರು. ಅದರಲ್ಲಿ ಹತ್ಯೆಯಾದ ಯುವಕರು ಸಾಮಾನ್ಯರಲ್ಲ ಸಮಾಜದಲ್ಲಿ ಸಂಘಸಂಸ್ಥೆಗಳ ಮೂಲಕ ಗುರುತಿಸಿಕೊಂಡವರು. ಅಂತಹ ಯುವಕರನ್ನು ದುಷ್ಠ ಶಕ್ತಿಗಳು ಇನ್ನಿಲ್ಲದಾಗಿಸಿದರು. ಊರಿಗೆ ಊರೇ ಕಣ್ಣೀರ ಕಡಲಲ್ಲಿ ತೆಲುವಂತೆ ಮಾಡಿದರು. ಒಂದೆಡೆಯಾದರೆ, ಇನ್ನೊಂದೆಡೆ ಇಂದಿಗೂ ಸಹ ಹೆತ್ತ ತಂದೆ ತಾಯಿಂದಿರರು ಸಹೋದರ ಪಾಲಿಗೆ ಇನ್ನಿಲ್ಲದಾಗಿಸಿ ಅವರ ಯೋಚನೆಯಲ್ಲೆ ಇರುವಂತೆ ಮಾಡಿದರು. ಹೀಗೆ ಸೃಷ್ಠಿಸಿದವರಿಗೆ ಶಿಕ್ಷೆ ಆಗಲೇ ಬೇಕಿದೆ. ನ್ಯಾಯದೇವತೆ ಕಣ್ತೇರೆದು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಎಡೆಮಾಡಿಕೊಡದಂತೆ ಕಾಯಬೇಕಾಗಿದೆ. ಅಂತಹ ಯುವಕ ನೆನಪಿಗಾಗಿ ನುಡಿನಮನ ಹಮ್ಮಿಕೊಂಡ ಅವರ ಸ್ನೇಹಿತರ ಕಾರ್ಯವನ್ನು ಶ್ಲಾಘೀಸಿದರು.
ಇವರ ಸಹಯಾರ್ಥವಾಗಿ ಆ ಇಬ್ಬರು ಯುವಕರ ಮನೆಯರ ಆರ್ಥಿಕ ಸಹಕಾರಕ್ಕೆ ನಾನು ಕೂಡ ಕೈಜೋಡಿಸುತ್ತೇನೆ. ಇಂಥಹ ಘಟನೆ ಇನ್ನೊಮ್ಮೆ ಮರುಕಳಿಸದಂತೆ ಸ್ಥಳೀಯ ಗ್ರಾಮದೇವತೆಯಲ್ಲಿ ಪ್ರಾರ್ಥಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟದ ನ್ಯಾಯವಾದಿ ಶ್ಯಾಮಸುಂದರ ನಾಯಿರಿ,ಸಾಮಾಜಿಕ ಹೋರಾಟಗಾರರಾದ ದಿನೇಶ್ ಗಾಣಿಗ, ಧನಂಜಯ ಕೋಟೇಶ್ವರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಷ್ ಶೆಟ್ಟಿ, ಧಾರ್ಮಿಕ ಮುಖಂಡ ಹರೀಷ್ ತೋಳಾರ್, ಕುಂದಾಪುರದ ಸಂಗಮ್ ಗ್ರೂಪ್ ನ ಪ್ರಮುಖರು ಉಪಸ್ಥಿತರಿದ್ದರು.
ನಂತರ ಆ ಇಬ್ಬರ ಸಹಾಯಾರ್ಥವಾಗಿ ಮಾರ್ಚ್ನಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ಕುರಿತಾಗಿ ಚರ್ಚಿಸಲಾಯಿತು. ಕಾರ್ಯಕ್ರಮವನ್ನು ಭಗತ್ ಸಿಂಗ್ ಯುವ ವೇದಿಕೆಯ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿ ನಿರೂಪಿಸಿದರು.