ಮಂಗಳೂರು, ಜ 28 ( Daijiworld News/MB) : 'ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್. ಬೇಕಾದ್ರೆ ತಲೆ ಕಡಿಯುವೆವು' ಎಂದು ಮಾಜಿ ಸಚಿವ ಯು.ಟಿ ಖಾದರ್ಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಸಿಎಎ ಪರ ರ್ಯಾಲಿಯಲ್ಲಿ ಯು.ಟಿ ಖಾದರ್ಗೆ ಕೊಲೆ ಬೆದರಿಕೆ ಹಾಕಲಾಗಿದ್ದು ಮಲಯಾಳಂ ಭಾಷೆಯಲ್ಲಿ ಖಾದರ್ ಅವರಿಗೆ ಜೀವ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ನಿಂತಿರುವ ಕೇಸರಿ ಶಾಲು ಧರಿಸಿದ್ದ ಕೆಲ ಯುವಕರ ಗುಂಪು "ನಾಯಿಯ ಮಗ ಖಾದರ್, ನಮ್ಮ ಸುದ್ದಿಗೆ ಬರಬೇಡ. ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್ ಮಾಡ್ತೇವೆ, ಬೇಕಾದ್ರೆ ತಲೆಯನ್ನೂ ಕಡಿಯುವೆವು" ಎಂದು ಚಪ್ಪಾಳೆ ತಟ್ಟುತ್ತಾ ಘೋಷಣೆ ಕೂಗಿ ನೃತ್ಯ ಮಾಡಿದ್ದಾರೆ.
ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸುಮಾರು 56 ಸೆಕೆಂಡ್ ಇದ್ದು ವಿಡಿಯೋ ಆರಂಭದಲ್ಲಿ "ಜೈ, ಜೈ ಬಿಜೆಪಿ" ಎಂದು ಯುವಕರು ಘೋಷಣೆ ಕೂಗಿರುವ ದೃಶ್ಯಗಳು ಕೂಡ ಇದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರೇ ಯು.ಟಿ ಖಾದರ್ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.