ಮಂಗಳೂರು, ಜ 29 (Daijiworld News/MB) : ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ಆದಿತ್ಯ ರಾವ್ ಬಾಂಬ್ ಇಟ್ಟು ಇಡೀ ದೇಶವೇ ಭಾರೀ ಸುದ್ದಿಯಾಗಿತ್ತು ಹಾಗೂ ಜನರು ಆತಂಕಕೊಳಗಾಗಿದ್ದರು. ಇದೀಗ ಮತ್ತೊಂದು ಹುಸಿ ಬಾಂಬ್ ಕರೆ ಬಂದಿದೆ.
ಸೋಮವಾರ ಸಂಜೆ ಅನಾಮಧೇಯ ವ್ಯಕ್ತಿಯೋರ್ವ ವಿಮಾಣ ನಿಲ್ದಾಣದ ಎಟಿಎಸ್ಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದು ಆ ಕೂಡಲೇ ಕರೆಯನ್ನು ಕಡಿತಗೊಳಿಸಿದ್ದಾನೆ ಎಂದು ಹೇಳಲಾಗಿದೆ.
ಈ ಹಿನ್ನಲೆಯಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಗಳು ತೀವ್ರ ತಪಾಸಣೆ ಮಾಡಿದ್ದು ಮಾತ್ರವಲ್ಲದೇ ಅಲ್ಲಿ ಬಿಗಿ ಬಂದೋಬಸ್ತ್ ಮಾಡಿದರು. ಆದರೆ ತಪಾಸಣೆ ನಡೆಸಿದ ನಂತರ ಇದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ.
ಸೋಮವಾರ ಸಂಜೆ ರಕ್ಷಣಾ ಸಚಿವರು ಮಂಗಳೂರಿನಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದು ಈ ಹಿನ್ನಲೆಯಲ್ಲಿ ನಿಲ್ದಾಣದಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು.
ಸಚಿವರ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಈ ಹುಸಿ ಬಾಂಬ್ ಕರೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿದೆ.