ಕುಂದಾಪುರ, ಜ 30 (Daijiworld News/MB) : ಜೇನುತುಪ್ಪ ಎಂದು ಭಾವಿಸಿ ಇಲಿಯ ಔಷಧಿ ಸೇವನೆ ಮಾಡಿ ಅಸ್ವಸ್ಥವಾಗಿದ ಮಹಿಳೆ ಮೃತಪಟ್ಟ ಘಟನೆ ಇಲ್ಲಿನ ವಡೇರ ಹೋಬಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಬೊಬ್ಬರ್ಯನಕಟ್ಟೆ ಎದುರು ರಸ್ತೆಯ ನಿವಾಸಿ ಅನುಪಮಾ (55) ಎಂದು ಗುರುತಿಸಲಾಗಿದೆ.
ಅನುಪಮಾ ಅವರು ಜ.೨೩ರಂದು ತಮಗೆ ಅನಾರೋಗ್ಯವಿದ್ದ ಹಿನ್ನಲೆಯಲ್ಲಿ ಔಷಧಿ ಸೇವಿಸುವಾಗ ಜೇನುತುಪ್ಪ ಎಂದು ಭಾವಿಸಿ ಇಲಿಗೆ ಹಾಕುವ ಔಷಧಿಯನ್ನು ಸೇವಿಸಿದ ಪರಿಣಾಮ ಅಸ್ವಸ್ಥರಾಗಿದ್ದರು. ಅವರನ್ನು ಚಿಕಿತ್ಸೆಗೆಂದು ಮಣಿಪಾಲ ಖಾಸಗೀ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆಗೆ ಸ್ಫಂದನೆ ನೀಡದೆ ಅವರು ಬುಧವಾರ ಮೃತಪಟ್ಟಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.