ಕಾಸರಗೋಡು, ಜ 30(Daijiworld News/MSP): ಮೀಯಪದವು ಹಯರ್ ಸೆಕಂಡರಿ ಶಾಲೆಯ ಶಿಕ್ಷಕಿಯಾಗಿದ್ದ ರೂಪಾಶ್ರೀ ರವರ ಕೊಲೆ ಪ್ರಕರಣದ ಆರೋಪಿ ಸಹಶಿಕ್ಷಕ ವೆಂಕಟರಮಣ ಕಾರಂತ ಮತ್ತು ಸ್ನೇಹಿತ ನಿರಂಜನನನ್ನು ಕ್ರೈಂ ಬ್ರಾಂಚ್ ಪೊಲೀಸರು ಬುಧವಾರ ಕೃತ್ಯ ನಡೆಸಿದ ಸ್ಥಳಗಳಿಗೆ ಕರೆತಂದು ಮಾಹಿತಿ ಕಲೆಹಾಕಿತು, ಕೆಲವೊಂದು ಮಹತ್ವದ ಮಾಹಿತಿಗಳು ತನಿಖಾ ತಂಡಕ್ಕೆ ಲಭಿಸಿದೆ.
ಆರೋಪಿಗಳ ಚಲನವಲನ ಸೆರೆಯಾದ ಸಿಸಿ ಟಿವಿ ಯ ದ್ರಶ್ಯಗಳನ್ನು ಒಳಗೊಂಡ ಹಾರ್ಡ್ ಡಿಸ್ಕನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಮಧ್ಯಾಹ್ನ ಮೀಯಪದವು ದುರ್ಗಿಪಳ್ಳ ಕ್ಕೆ ಕರೆ ತಂದು ಮಾಹಿತಿ ಪಡೆಯಲಾಯಿತು. ಜನವರಿ 16 ರಂದು ಮಧ್ಯಾಹ್ನ ದುರ್ಗಿಪಳ್ಳದಿಂದ ರೂಪಾಶ್ರೀಯನ್ನು ವೆಂಕಟ್ರಮಣ ಭಟ್ ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದಿದ್ದನು.
ರೂಪಾಶ್ರೀಯ ಸ್ಕೂಟರ್ ದುರ್ಗಿಪಳ್ಳ ದಲ್ಲಿ ಪತ್ತೆಯಾಗಿತ್ತು. ವೆಂಕಟ್ರಮಣ ಕಾರಂತ ದುರ್ಗಿಪಳ್ಳಕ್ಕೆ ಕಾರಿನಲ್ಲಿ ಬರುತ್ತಿರುವುದು ಹಾಗೂ ಬಳಿಕ ರೂಪಾಶ್ರೀ ದುರ್ಗಿಪಳ್ಳಕ್ಕೆ ಸ್ಕೂಟರ್ ನಲ್ಲಿ ಬರುತ್ತಿರುವ, ಕೆಲ ಸಮಯದಲ್ಲೇ ರೂಪಶ್ರೀಯನ್ನು ವೆಂಕಟ್ರಮಣ ಕಾರಂತ ಕಾರಿನಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಲೆಗೆ ಪ್ರಮುಖ ಸಾಕ್ಷಿಯಾಗಿ ಈ ದೃಶ್ಯಗಳು ಲಭಿಸಿವೆ.
ದುರ್ಗಿಪಳ್ಳದ ಬಳಿಕ ಕೊಲೆ ನಡೆಸಿದ ಮೀಯಪದವು ನಲ್ಲಿರುವ ವೆಂಕಟ್ರಮಣ ಕಾರಂತನ ಮನೆಗೆ ಕರೆತರಲಾಯಿತು . ಮನೆಯಲ್ಲಿ ಕೊಲೆ ನಡೆಸಿದ ಸ್ಥಳ , ಕೃತ್ಯ ನಡೆಸಿದ ಸಮಯದಲ್ಲಿನ ತನ್ನ ವಸ್ತ್ರಗಳನ್ನು ಉರಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಸ್ಥಳ ದಿಂದ ತಂಡವು ಮಾಹಿತಿ ಕಲೆ ಹಾಕಿದೆ.
ಬಚ್ಚಲು ಕೊನೆಯಲ್ಲಿ ರೂಪಾಶ್ರೀಯನ್ನು ನೀರುತುಂಬಿದ್ದ ಬಕೆಟ್ ಮತ್ತು ಸಣ್ಣ ಡ್ರಮ್ ನ್ನು ತನಿಖಾ ತಂಡ ಪರಿಶೀಲಿಸಿ ದಾಖಲೆಯಾಗಿ ವಶಕ್ಕೆ ತೆಗೆದುಕೊಂಡಿದೆ . ಬಳಿಕ ಆರೋಪಿಯ ನ್ನು ಮೃತದೇಹ ಸಮುದ್ರಕ್ಕೆಸೆದ ಮಂಜೇಶ್ವರ ಮತ್ತು ಮೃತದೇಹ ಪತ್ತೆಯಾದ ಕುಂಬಳೆ ಪೆರುವಾಡ್ ಗೆ ಕೊಂಡೊಯ್ದು ಮಾಹಿತಿ ಕಲೆಹಾಕಿದೆ.
ನ್ಯಾಯಾಂಗ ಬಂಧನ ದಲ್ಲಿದ್ದ ಆರೋಪಿಗಳನ್ನು ಐದು ದಿನಗಳ ಕಾಲ ಕ್ರೈಂ ಬ್ರಾಂಚ್ ಕಸ್ಟಡಿಗೆ ಒಪ್ಪಿಸಿದ್ದು ಮ್ ಮುಂದಿನ ದಿನಗಳಲ್ಲೂ ಮಾಹಿತಿ ಸಂಗ್ರಹ ಮುಂದುವರಿಯಲಿದೆ ಎಂದು ತನಿಖಾ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ . ಜನವರಿ 18 ರಂದು ನಾಪತ್ತೆಯಾಗಿದ್ದ ರೂಪಾಶ್ರೀ ರವರ ಮೃತದೇಹ ಜನವರಿ 18ರಂದು ಕುಂಬಳೆ ಪೆರುವಾಡ್ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು