ಮೂಡುಬಿದಿರೆ, ಜ 30 (Daijiworld News/MB) : ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬಾಯಾರಿಕೆ ಆಯಿತೆಂದು ಅವಸರವಾಗಿ ನೀರು ಕುಡಿದಾಗ ನೀರು ಗಂಟಲಲ್ಲಿ ಸಿಲುಕಿ ವ್ಯಕ್ತಿ ಮೃತಪಟ್ಟ ಘಟನೆ ಕೋಟೆ ಬಾಗಿಲಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಕೂಲಿ ಕಾರ್ಮಿಕ, ಪುತ್ತಿಗೆ ಪದವು ನಿವಾಸಿ ವಿಕ್ರಮ ಗೌಡ ಅವರ ಪುತ್ರ ವಸಂತ ಗೌಡ ಎಂದು ಗುರುತಿಸಲಾಗಿದೆ.
ಈ ಘಟನೆ ಕೋಟೆ ಬಾಗಿಲಿನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ನಡೆದಿದ್ದು ಅಸ್ವಸ್ಥರಾದ ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.