ಹೆಬ್ರಿ, ಜ.30 (Daijiworld News/PY) : ಹೆಬ್ರಿ ಕೆನರಾ ಬ್ಯಾಂಕ್ ಸಮೀಪದ ರೋಹಿದಾಸ್ ಶೆಣೈ ಎಂಬುವವರ ಬಂದೂಕು ಮಾರಾಟ ಅಂಗಡಿಗೆ ಜ.28ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಾಲ್ಕು ಬಂದೂಕುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಲೈಸನ್ಸ್ ಹೊಂದಿದ್ದ ಮದ್ದುಗುಂಡು, ಬಂದೂಕು ಡಿಪಾಸಿಟ್ ಹಾಗೂ ಬಂದೂಕು ಮಾರಾಟದ ಅಂಗಡಿಯ ಮೇಲಿಂದ ಹೆಂಚು ತೆಗೆದು ಒಳಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಸುಮಾರು 2001ನೇ ಇಸವಿಯಲ್ಲಿ ಡಿಪಾಸಿಟ್ ಇಟ್ಟಿದ್ದ ಹಳೆಯ 2 ಎಸ್ಬಿಎಂಎಲ್ ಕೋವಿ, 1 ಎಸ್ಬಿಬಿಎಲ್ ಕೋವಿ ಹಾಗೂ ಒಂದು 0.177 ಮಾಡೆಲ್ನ ಏರ್ ಗನ್ ಕಳವು ಮಾಡಿದ್ದಾರೆ.
ಕಳವಾದ ಕೋವಿಗಳ ಒಟ್ಟು ಮೌಲ್ಯ ಸುಮಾರು 11,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಯುತ್ತಿದೆ.