ಉಡುಪಿ,ಜ 31(Daijiworld News/MSP): ಎಲ್ಲಿ ನೋಡಿದ್ರೂ ರಾಷ್ಟ್ರಧ್ವಜ ಕಾಣಿಸ್ತಿದೆ ಸ್ವಾತಂತ್ರ್ಯ ಕಾಲದಲ್ಲಿ ನಾವು ಇರಲಿಲ್ಲ ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶವಾಗಿದೆ. ಕೇಸರಿ ಬಟ್ಟೆ ಧ್ವಜ ನೋಡಿ ಸಾಕಾಗಿತ್ತು. ಮುಸಲ್ಮಾನರನ್ನು ಅನುಮಾನದಿಂದ ನೋಡಬೇಡಿ. ಭಾರತ ಮಾತೆ ಕಣ್ಣೀರು ಹಾಕುತ್ತಾಳೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಅವರು ಗುರುವಾರ ಸಹಬಾಳ್ವೆ ಉಡುಪಿ ಹಾಗೂ ಇತರ ಎಡಪಂಥೀಯ ಮತ್ತು ಮುಸ್ಲಿಂ ಸಂಘಟನೆಗಳು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನ ಆಯೋಜಿಸಿದ್ದ ಸಿಎಎ, ಎನ್ ಆರ್ ಸಿ ಮತ್ತು ಎನ್ ಆರ್ ಪಿ ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಸಲ್ಮಾನರು ಭಾರತ ಮಾತೆಯ ಮಕ್ಕಳು, ಬಿಜೆಪಿಯವರಿಗೆ ಭಾರತದ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿಗರಿಗೆ ಬೇಕಾಗಿಲ್ಲ ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವು ಬಿಡಲ್ಲ. ಅಮೇರಿಕಾದಲ್ಲಿ ಜನಿಸಿದ್ರೆ ಪೌರತ್ವ ಸಿಗುತ್ತದೆ. 1955 ರಲ್ಲಿ ಜಾತಿ ಧರ್ಮದ ವಿಚಾರದಲ್ಲಿ ಪೌರತ್ವ ಕಾಯ್ದೆ ಮಾಡಿಲ್ಲ ,ನಿರಾಶ್ರಿತರು ನುಸುಳುಕೋರರು ಎಂಬ ಎರಡು ವಿಧ ಇದೆ. ಪೌರತ್ವ ಕಾಯ್ದೆ ಯನ್ನು ಧರ್ಮಾಧಾರಿತ ಮಾಡಿದ್ದಾರೆ. ಮೋದಿ ಸರಕಾರ ಸಂವಿಧಾನ ವಿರೋಧಿ ಸ್ವಾತಂತ್ರ್ಯ ನಂತರ ಸಂವಿಧಾನ ಮತ್ತು ಜನರ ನಡುವೆ ತಿಕ್ಕಾಟ ಶುರುವಾಗಿದೆ . ಸ್ವಲ್ಪ ದಿನದಲ್ಲೇ ದೇಶದ ಜಾತಕವನ್ನು ಜನ ಬದಲು ಮಾಡುತ್ತಾರೆ ಎಂದು ಹೇಳಿದರು.
ಮೋದಿ ಮತ್ತು ಅಮಿತ್ ಶಾ ಅವರನ್ನು ಕಿತ್ತೊಗೆಯಬೇಕು. ಬಿಜೆಪಿಗರು ಮೊದಲು ದಲಿತರನ್ನು ಸರಿಯಾಗಿ ನಡೆಸಿಕೊಳ್ಳಲಿ. ಬಿಜೆಪಿಗರು ವರ್ಣಾಶ್ರಮ ಪದ್ದತಿಯನ್ನು ಮತ್ತೆ ತರಲು ಹೊರಟಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಡುಪಿಯಲ್ಲಿ ಹೇಳಿಕೆ ನೀಡಿದರು.
ಮಹೇಂದ್ರ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 'ಇದೀಗ ದೇಶ ಬದಲಾವಣೆಯ ಹಂತಕ್ಕೆ ಬಂದಿದೆ. ಭಜರಂಗ ದಳದ ರಾಜ್ಯ ಸಂಚಾಲಕನಾಗಿದ್ದಾಗ ನಾನು ಮುಸ್ಲಿಂರನ್ನು ವಿರೋದಿಸುವ ಸಂಘಟನೆ ಆಗಬಾರದು ಎಂದು ಹೇಳಿದ್ದೆ. ದೇಶ ಒಡೆಯುವ ಮಾತನ್ನು ಬಿಟ್ಟು ದೇಶ ಕಟ್ಟುವ ಮಾತಿಗೆ ಕಿವಿ ಕೊಡಬೇಕು. ಆರ್ ಎಸ್ ಎಸ್ ಲೋಕದಲ್ಲಿರುವ ನಾಯಕರು ಈಗ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಹಿಂದು ಸಮಾಜದ ಮೇಲೆ ಪ್ರೀತಿಯಿಲ್ಲ. ಆರ್ ಎಸ್ ಎಸ್ ಮತ್ತು ಬಿಜೆಪಿ ಪಾಕಿಸ್ತಾನ ಮತ್ತು ಬಿಜೆಪಿಯನ್ನು ತೋರಿಸಿ ದೇಶ ವಿಭಜನೆ ಮಾಡುತ್ತಿದೆ. ಅವರು ಎಲ್ಲಿ ದಾರಿ ತಪ್ಪುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಇತ್ತೀಚೆಗೆ ವಿವೇಕಾನಂದರನ್ನೆ ದಿಕ್ಕರಿಸುವ ವ್ಯವಸ್ಥೆ ನಡೆಯುತ್ತಿದೆ. ನನ್ನ ದೇಶದಲ್ಲಿ ಶಾಂತಿ ಇರಬೇಕು ಎಂದು ಬಯಸುತ್ತೇನೆ.
ಹಿಂದುತ್ವದ ಪರಿಕಲ್ಪನೆ ಬದಲಾಗಬೇಕು. ಸ್ವಾಮಿ ವಿವೇಕಾನಂದರ ಹಿಂದುತ್ವದ ಆಲೋಚನೆ ಬೇರೆಯದೇ ಆಗಿದೆ. ದೇಶದಲ್ಲಿ ಭಯೋತ್ಪಾದನೆ ಹುಟ್ಟಿಸುವುದು ನಿಜವಾದ ಹಿಂದುತ್ವನಾ ಎಂದು ಪ್ರಶಿಸಿದರು, ಹೀಗೆ ಆದರೆ ಮುಂದೋಂದು ಭಾರತ ತಾಲಿಬಾನ್ ಆಗುವುದರಲ್ಲಿ ಸಂಶಯವಿಲ್ಲ. ಇವತ್ತು ಬಿಜೆಪಿ ಸರಕಾರ ಮಾಡುತ್ತಿರುವ ಕೆಲಸಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ, ಎಂದು ಮಹೇಂದ್ರ ಕುಮಾರ್ ಖೇದ ವ್ಯಕ್ತ ಪಡಿಸಿದರು.
ನಜ್ಮಾ ನಜೀರ್ ಮಾತನಾಡುತ್ತಾ, 'ಈ ಕೇಂದ್ರ ಸರಕಾರದ ಕಾನೂನುಗಳು ಕೇವಲ ಚುನಾವಣೆ ಮತ್ತು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಗಾಗಿ ಅನುಷ್ಠಾನಕ್ಕೆ ಮುಂದಾಗಿವೆ, ಪೋಲರೈಸೇಶನ್ ಹುನ್ನಾರ ನಡೆಸುತ್ತಿವೆ. ಒಂದು ಸಮುದಾಯವನ್ನು ದ್ವಿತೀಯ ದರ್ಜೆಯನ್ನಾಗಿ ಪ್ರತ್ಯೇಕಿಸಲು ಹೊರಟಿದೆ. ಹಿಂದುಗಳಿಗೆ ಹಿಂದೆಯಿಂದ, ಮುಸಲ್ಮಾನರಿಗೆ ಮುಂದೆಯಿಂದ ಈ ಸರಕಾರ ಚೂರಿಯಿಂದ ಇರಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು
ಅಮೂಲ್ಯ ಅವರು ಮಾತನಾಡಿ, 'ಪ್ರಧಾನ ಮಂತ್ರಿ ಮೋದಿ ಸಬ್ಕಾ ವಿಕಾಸ್ ಹೇಳುತ್ತಲೇ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಇದು ಪ್ಯಾಸಿಸ್ಟ್ ವಾದ. ಮೋದಿ ಅಲ್ಲ ಅವರ ಅಪ್ಪ ಬಂದರೂ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಸಾದ್ಯವಿಲ್ಲ, ನಾವು ಆರ್ ಎಸ್ ಎಸ್ ಚಡ್ಡಿಗಳಿಗೆ ಹೆದರಲ್ಲ. ಈ ಹೋರಾಟ ಜಾತಿವಾದ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾಋದ ವಿರುದ್ದ ಎಂದು ಮೋದಿಗೆ ಸವಾಲೆಸೆದರು.
ಭವ್ಯ ಅವರು ಮಾತನಾಡಿ, "ದೇಶದಲ್ಲಿ ಅಭಿವೃದ್ದಿಯ ಪಥ ಕುಸಿಯುತ್ತಿದೆ, ನಿರುದ್ಯೋಗ ತಾಂಡವಡುತ್ತಿದೆ. ರಾಜಕೀಯದಲ್ಲಿ ಮೋದಿಯ ಘನತೆ ಕುಂದುತ್ತಿದೆ. ಗೂಡ್ಸೆಯ ಪರವಾಗಿ ನಿಂತವರು ಇಂದು ಪಾರ್ಲಿಮೆಂಟರಿಯಲ್ಲಿ ಇದ್ದಾರೆ. ಪ್ರತಿಭಟನೆಯ ದಾರಿ ಅಹಿಂಸೆ, ಸತ್ಯದ ದಾರಿಲ್ಲಿರಬೇಕು. ಅದೇ ಗಾಂದಿಗೆ ಸಲ್ಲಿಸುವ ನಿಜವಾದ ಗೌರವ" ಎಂದರು.
ಮುಖ್ಯ ಭಾಷಣಕಾರ ಚಂದ್ರಶೇಖರ್ ಅಜಾದ್ ತಮ್ಮ ಅನಾರೋಗ್ಯದಿಂದ ಸಭೇಯಲ್ಲಿ ಪಾಲ್ಗೊಂಡಿಲ್ಲ, ಆದರೆ ವಿಡೀಯೋ ಮುಖಾಂತರ ಅವರು ಮಾತನಾಡಿ, 'ನಾನು ಭಾರತದ ಸಂವಿಧನ ಕಾಯುವ ಸಿಪಾಯಿ. ದೇಶದ ಜನರೇ ವಿಪಕ್ಷವಾಗಿ ಆಂಧೋಲನವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲ ಭಾರತೀಯ ಪ್ರಜೆಗಳಿಗಾಘಿ ಮಾಡಿದ ಸಂವಿಧಾನವನ್ನು ರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಸಂವಿದಾನದ ರಕ್ಷಣೆಗೆ ತಮ್ಮ ಹೋರಟದಲ್ಲಿ ಸದಾ ಕೈ ಜೋಡಿಸುತ್ತೇನೆ ಎಂದು ಆತ್ಮವಿಶ್ವಾಸ ತುಂಬಿದರು.
ಕವಿತಾ ರೆಡ್ಡಿ, ಮೆಹರೋಝ್ ಖಾನ್, ಭವ್ಯ ನರಸಿಂಹಮೂರ್ತಿ ಮುಂತಾದವರು ಸಭೆಯನ್ನು ಉದ್ದೇಶಿಸಿ ಮತನಾಡಿದರು. ಎಡಪಂಕ್ತೀಯ ಸಂಘಟನೆಗಳ ನಾಯಕರಾದ ಜಿ ರಾಜಶೇಖರ್, ಫ್ರಶಾಂತ್ ಜತ್ತನ್ನ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಐವಾನ್, ಅಸಾದ್ ಜಪರ್, ಹಾಜಿ ಅಭ್ದುಲ್ಲಾ ಜಫರ್, ರಮೇಶ್ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.
ವಿಲಿಯಮ್ ಮಾರ್ಟಿಸ್, ಸಮಿತಿ ಗೌರವಾಧ್ಯಕ್ಷರು, ಸಂವಿಧಾನ ಪೀಠಿಕೆಯನ್ನುಚ್ಚರಿಸಿದರು. ಸಹಬಾಳ್ವೆ ಉಡುಪಿಯ ಅಧ್ಯಕ್ಷ ಅಮೃತ್ ಶೆಣೈ ಪ್ರಸ್ತಾವನೆಗೈದರು. ದಲಿತ ಸಂಘಟನೆಯ ಸುಂದರ್ ಮಾಸ್ತರ್ ಧನ್ಯವಾದ ಮಾಡಿದರು.