ಉಡುಪಿ, ಜ 31 (DaijiworldNews/SM): ಆಯೋಧ್ಯೆಯಲ್ಲಿ ರಾಮ, ಹನುಮನ ಮೂರ್ತಿಯ ಆರಾಧನೆ ನಡೆಯುತ್ತಿತ್ತು. ಬಾಬರಿ ಮಸೀದಿ ಇರಲಿಲ್ಲ. ಅದನ್ನು ಬಾಬ್ರಿ ಮಸೀದಿ ಅಂತಲೂ ಕರೆಯಬೇಡಿ, ಅಲ್ಲಿ ಯಾವ ಪ್ರಾರ್ಥನೆಯೂ ನಡೆದಿಲ್ಲ. ಅನ್ಯಾಯ ಅನಾಚಾರ ಮಾಡಿದ ಬಾಬರನ ಹೆಸರಿನಲ್ಲಿ ಮಸೀದಿ ಉಳಿಸಲು ಹೋಗಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದ್ದಾರೆ.
ಕಟಪಾಡಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ನಡೆದ ಜನ ಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಅಯೋಧ್ಯೆಯಲ್ಲಿ ಬಾಂಗ್ ಮಾಡುವ ವ್ಯವಸ್ಥೆಯೂ ಇರಲಿಲ್ಲ ಎಂದರು. ಇನ್ನು ಮುಸ್ಲಿಮರಲ್ಲಿ ಎಲ್ಲರೂ ಕೆಟ್ಟವರಲ್ಲ. ಅಬ್ದುಲ್ ಕಲಾಮ್ ನಂತಹ ಒಳ್ಳೆಯ ಜಾತಿಯವರು ಇದ್ದಾರೆ ಎಂದರು. ಅಯೋದ್ಯೆಯಲ್ಲಿ ಇದ್ದದ್ದು ಬರೀ ಕಟ್ಟಡ ಅಷ್ಟೆ. ಯಾವುದೇ ಪ್ರಾರ್ಥನಾ ಮಂದಿರ ಅಲ್ಲ ಎಂದರು.
ಪೌರತ್ವ ಎನ್ನುವುದು ಕೊಡುವುದಕ್ಕಾಗಿ, ಕಿತ್ತುಕೊಳ್ಳುವುದಕ್ಕಾಗಿ ಅಲ್ಲ. ಎಲ್ಲರೂ ಎನ್ಆರ್ಸಿ ಅಡಿಯಲ್ಲಿ ನೋಂದಾವಣಿಯಾಗಲೇಬೇಕು. "ಕಳೆದ 100 ವರ್ಷದಿಂದ ಈ ದೇಶದಲ್ಲಿರುವ ರಾಷ್ಟ್ರೀಯ ಶಕ್ತಿಯನ್ನು ದಮನಿಸುವ ಕೆಲಸ ನಡೆಯುತ್ತಲೇ ಇದೆ. ಕಳೆದ 100 ವರ್ಷಗಳಿಂದ ಈ ದೇಶದಲ್ಲಿ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಇದು ಮಾತ್ರ ಆಧಾರಿತವಾದ ಸಮಾಜ. ತಾಯಿಯಂದಿರೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು.
ನೆಹರೂ ಹಾಗೂ ಸಂಗಡಿಗರು ತಮ್ಮ ಸ್ಥಾನಕ್ಕಾಗಿ ದೇಶವನ್ನು ತುಂಡು ಮಾಡಿದರು. ಬ್ರಿಟಿಷರು, ಮುಸ್ಲಿಂ ಮತ್ತು ಕಾಂಗ್ರೆಸ್ ಮಾತ್ರ ಭಾರತದ ವಿಭಜನೆ ಕಾರಣವಾಯ್ತು. ಇನ್ನೂ ಮುಂದುವರೆದಿದ್ದರೆ ಭಾರತ ಛಿದ್ರವಾಗುತ್ತಿತ್ತು. ಅಂದು ಕಾಂಗ್ರೆಸ್ ಕೂಡಾ ಅಖಂಡ ಹಿಂದೂಸ್ತಾನದ ರಚನೆಯೆ ಸ್ವಾತಂತ್ರ್ಯ ಎಂದಿತ್ತು. ನಪುಂಸಕ ಕಾಂಗ್ರೆಸ್ ನಿಂದ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅಂಬೇಡ್ಕರ್ ಓರ್ವ ರಾಷ್ಟ್ರೀಯ ನಾಯಕ. ಹಿಂದೂ ಎಂಬುವುದು ಜೀವನದ ರೀತಿ. ದೇಶ ವಿಭಜನೆಯ ನಂತರ ಕೂಡಾ ಪಾಕಿಸ್ತಾನದ ಹಿಂದೂ ಸಮಾಜದ ಮೇಲೆ ಅತ್ಯಾಚಾರ ನಡೆಯುತ್ತಾಲೇ ಇದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.