ಉಡುಪಿ, ಜ 31 (DaijiworldNews/SM): ಇಡಿ ದೇಶದಲ್ಲಿ ಪೂರ್ವ ನಿಯೋಜಿತ ಗಲಭೆಗಳು ನಡೆದಿವೆ. ಕಾಶ್ಮೀರದಲ್ಲಿ ಮಾಡಿದಂತೆ ಮಂಗಳೂರಿನಲ್ಲಿ ಕೂಡಾ ಗಲಭೆಗಳು ನಡೆದವು. ಇದರಲ್ಲಿ ೫೩ ಜನ ಪೋಲಿಸರಿಗೆ ಗಾಯವಾಗಿದೆ. ಇಬ್ಬರು ಭಯೋತ್ಪಾದಕರನ್ನು ಮುಗಿಸಿದರು. ಇಡೀ ರಾಜ್ಯವನ್ನು ಭಯೋತ್ಪದನಾ ಕೇಂದ್ರವನ್ನಾಗಿ ಮಾಡುವಂತಹ ಪ್ರಯೋಗ ಶಾಲೆಯನ್ನು ಮಂಗಳೂರನ್ನು ಮಾಡಲು ಹೊರಟಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಕಟಪಾಡಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ನಡೆದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಎನ್ ಅರ್ ಸಿ ಎಂಬುವುದು ಕೇವಲ ನೋಂದಾವಣೆಯ ಕಾನೂನು. ಈ ಕಾನೂನು ದೇಶ ಭಕ್ತರಿಗೆ ನೀಡುವ ವ್ಯವಸ್ಥೆ. ಕ್ರಿಶ್ಚಿಯನ್, ಮುಸ್ಲಿಂ ಸಮಾಜ ಶಾಂತಿಯಿಂದ ಬದುಕಲು ಹಿಂದೂ ಸಮಾಜ ಇರಬೇಕು. ಭಾರತ ಹಿಂದು ಸಮಾಜದ ಮೇಲೆ ನಿಂತಿದೆ ಎಂದರು.
ಇನ್ನು ಮುಸಲ್ಮಾನರು ಎಲ್ಲರ ಜೊತೆ ಒಂದಾಗಿ ಬಾಳುವುದಾದರೆ ಬಾಳಲಿ. ಇಲ್ಲವಾದಲ್ಲಿ ತಮ್ಮ ನೆಲಕ್ಕೆ ಮರಳಲಿ. ಮೋದಿ ಮತ್ತು ಅಮಿತ್ ಶಾನಂತವರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು. ಭಾರತ ಎಂದರೆ ಅದು ಧರ್ಮ ಛತ್ರ ಅಲ್ಲ ಅದು ಪವಿತ್ರ ದೇಶ. ಎಲ್ಲರೂ ನುಸುಳಲು ಸಾಧ್ಯವಿಲ್ಲ. ಸತ್ಯ, ನ್ಯಾಯ, ಧರ್ಮ ಇದ್ದು ಹೋರಾಡಿದರೆ, ಜಗತ್ತು ತಲೆ ಬಾಗುತ್ತದೆ. ನಮ್ಮ ದೇಶ ಸೂಪರ್ ಪವರ್ ಆಗಬೇಕಿಲ್ಲ. ವಿಶ್ವ ಗುರು ಆಗಬೇಕೆಂಬುದು ಮೋದಿ ಚಿಂತನೆ. ಅದು ಭಾರತದ ಚಿಂತನೆ ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಭೆಯಲ್ಲಿ ವಿನಂತಿಸಿದರು.