ಬೆಳ್ತಂಗಡಿ, ಫೆ 2 (DaijiworldNews/SM): ಇಲ್ಲಿನ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ಮೈದಾನದಲ್ಲಿ ಕಥೊಲಿಕ್ ಮಹಾ ಸಮಾವೇಶ- 2020 ನಡೆಯಿತು. ಸಮಾವೇಶದಲ್ಲಿ 30,000ಕ್ಕೂ ಅಧಿಕ ಕಥೊಲಿಕರು ಭಾಗವಹಿಸಿ ಒಂದು ಐತಿಹಾಸಿಕ ದಿನಕ್ಕೆ ಸಾಕ್ಷಿಯಾದರು.
ಮಡಂತ್ಯಾರ್ ಪಟ್ಟಣದಿಂದ ಚರ್ಚ್ ಮೈದಾನದವರೆಗೆ 'ಏಕತೆ ರ್ಯಾಲಿ'ಯೊಂದಿಗೆ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ರ್ಯಾಲಿಯಲ್ಲಿ ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿಯ ಬಿಷಪ್ಗಳು, ನೂರಾರು ಧರ್ಮಗುರುಗಳು, ಧರ್ಮಭಗಿಣಿಯರು ಮತ್ತು ಸಮುದಾಯದ ಸಾವಿರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ಮಂಗಳೂರಿನ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ರ್ಯಾಲಿಗೆ ಚಾಲನೆ ನೀಡಿದರು.
ಉದ್ಘಾಟನೆಗೆ ಮುಂಚಿತವಾಗಿ ಜೌಪಚಾರಿಕವಾಗಿ ಎನ್ಆರ್ಐ ಉದ್ಯಮಿ ಮತ್ತು ಲೋಕೋಪಕಾರಿ ರೊನಾಲ್ಡ್ ಕೊಲಾಸೊ ಕ್ಯಾಥೊಲಿಕ್ ಸಮಾವೇಶ-2020ರ ಧ್ವಜರೋಹಣಗೈದರು. ಬಿಷಪ್ಗಳು ಮತ್ತು ಗಣ್ಯರು ಶ್ರೀಗಂಧದ ಸಸಿಗಳನ್ನು ನೆಟ್ಟು ದೀಪ ಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.
ಬೆಳ್ತಂಗಡಿ ಸಿರೋ ಮಲಬಾರ್ ಡಯಾಸಿಸ್ ನ ಬಿಷಪ್ ಡಾ. ಲಾರೆನ್ಸ್ ಮುಕ್ಕುಯಿ, ಪುತ್ತೂರು ಸಿರೋ ಮಲಂಕರ ಡಯಾಸಿಸ್ ನ ಬಿಷಪ್ ಡಾ. ಗೀವರ್ಗೀಸ್ ಮಾರ್ ದಿವಣ್ಣಾಸಿಯೊಸ್, ಮಂಗಳೂರು ಡಯಾಸಿಸ್ ನ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ, ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲೊಸೊ, ಐಸಿವೈಎಂ ನಿರ್ದೇಶಕ ಫಾ. ರೊನಾಲ್ಡ್ ಡಿಸೋಜಾ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.