ಬೆಳ್ತಂಗಡಿ, ಫೆ 2 (DaijiworldNews/SM): ನಾನು ಕೂಡ ಕಲ್ಲಡ್ಕ ಶ್ರೀರಾಮ ಶಾಲೆಯ ಅಭಿಮಾನಿ. ಆ ಶಾಲೆಗೆ ನಾನು ಕೂಡ ಅನುದಾನ ನೀಡಿದ್ದೇನೆ. ಹಾಗೂ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಆದರೆ, ಜನರ ಮನಸ್ಸುಗಳನ್ನು ಒಡೆಯುವ ಕಾರ್ಯವನ್ನು ಮಾಡದಿರಿ ಎಂದು ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ ಕಲ್ಲಡ್ಕ ಪ್ರಭಾಕರ್ ಭಟ್ ರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಡಂತ್ಯಾರ್ ಚರ್ಚ್ ವಠಾರದಲ್ಲಿ ನಡೆದ ಕಥೊಲಿಕ್ ಮಹಾ ಸಮಾವೇಶ-2020ರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಚರ್ಚ್ ನಲ್ಲಿ ಧರ್ಮಗುರುಗಳ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಫಾದರ್ ಎಂದು ಕರೆಯೂದಕ್ಕೆ ಪ್ರಶ್ನಿಸಿದ್ದಾರೆ. ಇದಕ್ಕೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ದೇಶದಲ್ಲಿರುವ ಮಹಿಳೆಯರಿಗೆ ತಾಯಿಯ ಸಮಾನವಾದ ಗೌರವ ನೀಡುತ್ತೇವೆ. ಅದೇ ರೀತಿ ನಮ್ಮ ಧರ್ಮದ ಧರ್ಮಗುರುಗಳಿಗೂ ನಾವು ಗೌರವವನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
ಈ ವಿಚಾರಗಳ ಬಗ್ಗೆ ಸುಖಾಸುಮ್ಮನೆ ಹೇಳಿಕೆ ನೀಡಿಕೊಂಡು ಜನರ ಮನಸ್ಸುಗಳನ್ನು ಒಡೆಯುವ ಕಾರ್ಯ ನಡೆಸಬೇಡಿ ಎಂದು ರೊನಾಲ್ಡ್ ಕುಲಾಸೊ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸಮಾವೇಶದಲ್ಲಿ ಮಾತನಾಡಿದ ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಧರ್ಮಗುರುಗಳನ್ನು ಫಾದರ್ ಗಳೆಂದು ಯಾಕೆ ಕರೆಯುತ್ತಾರೆ ಎಂಬುವುದಕ್ಕೆ ರೊನಾಲ್ಡ್ ಕುಲಾಸೊ ಪ್ರತಿಕ್ರಿಯಿಸಿದ್ದು, ಜನರ ಮನಸ್ಸಿಗಳನ್ನು ಒಡೆಯುವ ಕೆಲಸ ಮಾಡದಿರಿ ಎಂಬುವುದಾಗಿ ಮನವಿ ಮಾಡಿಕೊಂಡಿದ್ದಾರೆ.