ಮಂಗಳೂರು, ಫೆ.03 (Daijiworld News/PY) : ಮಂಗಳೂರಿನ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಾರುತಿ ಡೊಂಕಣ್ಣ ಮಾಂಗ್ಲಿ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 52 ವರ್ಷವಾಗಿತ್ತು.
ಉತ್ತರ ಕನ್ನಡದ ಹಳಿಯಾಳದಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಮಾರುತಿ 2010ಕ್ಕೆ ಸರ್ಕಾರಿ ಸೇವೆಗೆ ಸೇರಿದರು. ಉತ್ತರ ಕನ್ನಡದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ ಅವರು, 2016ರ ಜೂನ್ನಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜನಕರಾಗಿ ಮಂಗಳೂರಿನಲ್ಲಿ ಸೇವೆ ಆರಂಭಿಸಿದರು. ಮಿತಭಾಷಿ, ಕಠಿಣ ಪರಿಶ್ರಮಿ ಹಾಗೂ ಕಾನೂನು ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದರು. ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಅಭಿಯೋಜಕರಾಗಿ ಪದೋನ್ನತಿ ಹೊಂದಿದ್ದರು. ಹುದ್ದೆ ಖಾಲಿ ಇಲ್ಲದ ಕಾರಣ ವರ್ಗಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿರುವ ಮಾಂಗ್ಲಿ ಅವರ ಅಕಾಲಿಕ ಸಾವಿಗೆ ಮಂಗಳೂರು ವಕೀಲರ ಸಂಘ ಅತೀವ ಸಂತಾಪಗಳನ್ನು ಸೂಚಿಸುತ್ತಿದೆ.
ಮಾರುತಿ ಡೊಂಕಣ್ಣ ಮಾಂಗ್ಲಿ ಅವರ ಪುತ್ರ ಎಲ್ಎಲ್ಬಿ ಪದವಿಯನ್ನು ಮುಗಿಸಿದ್ದು, ಈಗಷ್ಟೇ ವಕೀಲರಾಗಿ ಕಾನೂನು ಸೇವೆ ಆರಂಭಿಸಿದ್ದರು.