ಕಾಸರಗೋಡು, ಫೆ 5 (Daijiworld News/MSP): ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಚೀನಾದಿಂದ ಬಂದ 91 ಮತ್ತು ಇತರ ದೇಶದಿಂದ ಬಂದ ಮೂರು ಮಂದಿ ಸೇರಿದಂತೆ 94 ಮಂದಿಯ ಆರೋಗ್ಯ ಇಲಾಖೆ ನಿಗಾ ಇರಿಸಿದ್ದು , ಈ ಪೈಕಿ 17ಮಂದಿಯ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಈ ಪೈಕಿ ಐದು ಮಂದಿಯ ಪರೀಕ್ಷಾ ವರದಿ ಲಭಿಸಿದ್ದು, ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು ತಡೆಗೆ ರಚಿಸಲಾದ ವಿವಿಧ ಉಪಸಮಿತಿಯು ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿದೆ.
ಈ ನಡುವೆ ರೋಗ ತಡೆ ಕಾರ್ಯಾಚರಣೆ ಕುರಿತು ಅವಲೋಕಿಸಲು ಕೋಜಿಕ್ಕೋಡ್ ವೈದ್ಯಕೀಯ ಕಾಲೇಜಿನ ತಜ್ಞ ತಂಡ ಕಾಸರಗೋಡಿಗೆ ಪರಿಸ್ಥಿತಿ ಅವಲೋಕನ ನಡೆಸಲಿದೆ.