ಮಂಗಳೂರು, ಫೆ 06 (Daijiworld News/MB):ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ 40 ದಿನಗಳ ಶಿಶುವನ್ನು ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಕೆಎಂಸಿಸಿ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ.
ಮಗು ಸೈಫುಲ್ ಅಝ್ಮಾನ್ ನನ್ನುಕೆಎಂಸಿಸಿ ಆಂಬ್ಯುಲೆನ್ಸ್ನಲ್ಲಿ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಬೇಕೆಂದು ಸೂಚನೆ ಮಾಡಿದ ಹಿನ್ನಲೆಯಲ್ಲಿ ಆಂಬುಲೆನ್ಸ್ ಮೂಲಕ ಶೂನ್ಯ ಸಂಚಾರದಟ್ಟಣೆ ಮಾರ್ಗವಾಗಿ ಬೆಂಗಳೂರಿನತ್ತ ತನ್ನ ಪ್ರಯಾಣ ಆರಂಭ ಮಾಡಿದ್ದು ಕೆಲವೇ ಗಂಟೆಗಳಲ್ಲಿ ತಲುಪುವ ನಿರೀಕ್ಷಿಸಲಾಗಿತ್ತು.
ಮಂಗಳೂರಿನಿಂದ, ಬಿಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಲ್ಲಿದ್ದು ಈ ಸಂದರ್ಭದಲ್ಲಿ ಉಪ್ಪಿನಂಗಡಿ,ನೆಲ್ಯಾಡಿ,ಗುಂಡ್ಯ ಕಡೆಗಳಲ್ಲಿ ಪೋಲೀಸರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಂಚಾರ ದಟ್ಟಣೆಯಾಗದಂತೆ ಸಹಕಾರ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಸಾರ್ವಜಕನಿಕರು ಕೂಡಾ ದಾರಿಗೆ ಬರದೆ ಸಹಕಾರ ನೀಡಿದ್ದಾರೆ.
ಜಯದೇವ ಆಸ್ಪತ್ರೆಗೆ ಶೀಘ್ರವಾಗಿ ತಲುಪಲು ಆಂಬುಲೆನ್ಸ್ಗೆ ಸಹಾಯ ಮಾಡಲು ದಾರಿಯಲ್ಲಿರುವ ಪ್ರಯಾಣಿಕರನ್ನು ಕೋರಲಾಗಿದೆ.