ಉಡುಪಿ, ಫೆ 6 (Daijiworld News/MSP): "ಸಂಸದ ಅನಂತ್ ಕುಮಾರ್ ಮಾನಸಿಕ ಸ್ಥೀಮಿತ ಕಳ್ಕೊಂಡಿದ್ದು, ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ ಅನಂತ್ ಕುಮಾರ್ ಹೆಗ್ಡೆಯನ್ನು ಟ್ರೀಟ್ ಮೆಂಟ್ ಕೊಡಿಸಲಿ, ಇಲ್ಲವಾದ್ರೆ ಸಂಸದ ಸ್ಥಾನದಿಂದ ವಜಾ ಮಾಡಲಿ" ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಕಿಡಿಕಾರಿದ್ದಾರೆ
ಅವರು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ, "ಇದು ಸಂಸದ ಅನಂತ್ ಕುಮಾರ್ ಹೆಗಡೆ ಧ್ವನಿ ಅಲ್ಲ. ಇದು ಬಿಜೆಪಿ ಮೈಂಡ್ ಸೆಟ್. ಬಿಜೆಪಿಯೇ ಎಚ್ಚರಿಸಿದರೂ ಹೆಗಡೆ ಕ್ಷಮೆ ಕೇಳಿಲ್ಲ. ದೇಶದ ಪರಂಪರೆ ಬಗ್ಗೆ, ಗಾಂಧೀಜಿ, ಅಂಬೇಡ್ಕರ್ ಬಗ್ಗೆ ಗೌರವ ಇಲ್ಲವೇ. ಗೌರವ ಇದ್ರೆ ಹೆಗಡೆ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ. ಮಾತ್ರವಲ್ಲದೆ ಅನಂತ್ ಕುಮಾರ್ ಹೆಗ್ಡೆ ಅವರ ಸದಸ್ಯತ್ವವನ್ನೇ ರದ್ದುಗೊಳಿಸಿ. ರಾಷ್ಟ್ರಪತಿ, ಸ್ಪೀಕರ್, ಪ್ರಧಾನಿ ಇದೆಲ್ಲಾ ಗಮನಿಸಬೇಕು. ಈ ವಿಷಯವನ್ನು ಪ್ರಧಾನಿ ಹಾಗೂ ಸ್ಪೀಕರ್ ಗಮನದಲ್ಲಿಟ್ಟು ಅನಂತ್ ಕುಮಾರ್ ಅವರನ್ನು ಡಿಸ್ ಕ್ವಾಲಿಫೈಯ್ ಮಾಡಬೇಕು. ಅವರ ಮೇಲೆ ಸಂವಿಧಾನ ವಿರೋಧಿ ನಡೆಗಾಗಿ ಕೇಸು ದಾಖಲಿಸಬೇಕು" ಎಂದು ಒತ್ತಾಯಿಸಿದರು.
ರಾಜ್ಯ ಮಂತ್ರಿ ಮಂಡಲ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, "ರಾಜ್ಯದ ಇತಿಹಾಸ ದಲ್ಲಿ ಇವತ್ತು ಕರಾಳ ದಿನ, ಜನಾದೇಶಕ್ಕೆ ದ್ರೋಹ ಮಾಡಿದವರು, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದವರು, ರಾಜಕೀಯ ಜನ್ಮಕೊಟ್ಟವರಿಗೆ ದ್ರೋಹ ಮಾಡಿದವರು, ಬಿಜೆಪಿ ವ್ಯಾಪಾರ ಮಾಡಿಕೊಂಡವರು, ವಾಮಮಾರ್ಗದಲ್ಲಿ ಆಯ್ಕೆಯಾದ ಹತ್ತು ಶಾಸಕರನ್ನ ಮಂತ್ರಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕ, ಪ್ರಜಾಪ್ರಭುತ್ವಕ್ಕೆ ಮಾರಕ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಹಣದಹೊಳೆ, ಅಧಿಕಾರ ದುರ್ಬಳಕೆ ಮಾಡಿ ನೀವು ಗೆದ್ದದ್ದು ಗೊತ್ತಿದೆ. ಸೋತರೆ ರಾಜಕೀಯ ಯಾವುದೇ ಪಾರ್ಟಿ ನಿರ್ನಾಮ ಆಗೋದಿಲ್ಲ ನಿಮಗೂ ಗೊತ್ತಿರಲಿ. ನಿಮ್ಮ ದಾಸ್ಯ ಪ್ರವೃತ್ತಿ ಪ್ರಮಾಣವಚನ ವೇಳೆ ಬಯಲಾಗಿದೆ. ಇನ್ನಾದರೂ ದಾಸ್ಯದ ಪ್ರವೃತ್ತಿ ಬಿಡಿ. ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಿ. ರಾಜ್ಯದ ಹಿತ ಕಾಪಾಡಲು ಕೇಂದ್ರದಿಂದ ಅನುದಾನ ತನ್ನಿ" ಎಂದು ಹೇಳಿದರು.