ಮಂಗಳೂರು, ಫೆ.06 (Daijiworld News/PY) : ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹದ ಅಂಗವಾಗಿ ಫೆ.5ರಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ರಕ್ತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಇಂದು ನಮ್ಮ ನಾಡಿನಲ್ಲಿ ವಿವಿಧ ರೀತಿಯ ಕಾಯಿಲೆಗಳಿಗೆ ನಮ್ಮ ಸಹೋದರ, ಸಹೋದರಿಯರು ತುತ್ತಾಗುತ್ತಿದ್ದು, ರಕ್ತ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲಿರುವ ರಕ್ತ ಸಂಗ್ರಹ ಕೇಂದ್ರಗಳಲ್ಲಿ ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ತಿಳಿಸಿದರು.
ಈ ಸಂದರ್ಭ ರೋಶನ್ ಡಿ'ಸೋಜಾ, ಪಾಯಜ್ ಕುದ್ರೋಳಿ, ಪ್ರದೀಪ್ ನಾಯರ್, ಗೈಟನ್ ರೋಡ್ರಿಗಸ್ ಸೇರಿದಂತೆ ಹಲವು ಪ್ರಮುಖ ಕಾರ್ಯಕರ್ತರು ರಕ್ತದಾನ ಮಾಡಿದರು. ಆನಂದ ಅಮೀನ್ ಅಡ್ಯಾರ್, ಸುಭಾಷ್ ಶೆಟ್ಟಿ, ತನ್ವೀರ್, ಗೋಲ್ಡನ್ ಪಾರುಕ್, ಕಾರ್ತಿಕ್ ಕದ್ರಿ, ಡಾ.ಶರತ್ ಮತ್ತಿತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು
ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹವು ಫೆ.5 ರಿಂದ ಫೆ.11ರವರೆಗೆ ನಡೆಯಲಿದೆ.