ವಿಟ್ಲ, ಫೆ 6 (DaijiworldNews/SM): ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ಕನ್ಯಾನ ನಿವಾಸಿ ಸುರೇಶ್ (31) ಬಂಧಿತ ಆರೋಪಿಯಾಗಿದ್ದಾನೆ.
ದೌರ್ಜನ್ಯಕ್ಕೊಳಗಾದ 14 ವರ್ಷದ ಬಾಲಕ ನೀಡಿದ ಹೇಳಿಕೆಯ ಪ್ರಕಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಹಣದ ಆಮಿಷ ತೋರಿಸಿ, ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಶಾಲೆಯಿಂದ ಬಂದ ಬಾಲಕ ಜ್ವರದಿಂದ ಬಳಲುತ್ತಿದ್ದು, ಔಷಧಿ ನೀಡಿದರೂ ಸೋಮವಾರ ಮತ್ತೆ ಶಾಲೆಗೆ ಹೋಗಲು ಹಿಂದೇಟು ಹಾಕಿದ್ದು, ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಬಾಲಕ ದೌರ್ಜನ್ಯಕ್ಕೊಳಗಾಗಿದ್ದನ್ನು ಪೋಷಕರಿಗೆ ತಿಳಿಸಿದ್ದ. ಪೋಷಕರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿತ್ತು.