ಕಾಸರಗೋಡು , ಫೆ 08 (Daijiworld News/MB) : ಮಂಗಳೂರಿಗೆ ತೆರಳುತ್ತಿದ್ದ ಎರಡು ರೈಲುಗಳಲ್ಲಿ ಭಾರೀ ದರೋಡೆ ನಡೆದಿದ್ದು , ಲಕ್ಷಾಂತರ ರೂ . ಮೌಲ್ಯದ ಚಿನ್ನಾಭರಣ ವನ್ನು ದೋಚಲಾಗಿದೆ.
ಸಾಂದರ್ಭಿಕ ಚಿತ್ರ
ಚೆನ್ನೈ - ಮಂಗಳೂರು ನಡುವಿನ ಸೂಪರ್ ಫಾಸ್ಟ್ ಮತ್ತು ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕಳವು ನಡೆದಿದ್ದು, ಪ್ರಯಾಣಿಕರ ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಲಾಗಿದೆ .
ತಿರುವನಂತಪುರ - ಮಂಗಳೂರು ನಡುವಿನ ಮಲಬಾರ್ ಎಕ್ಸ್ ಪ್ರೆಸ್ ನಲ್ಲಿ ಕಾಞ೦ಗಾಡ್ ನಿವಾಸಿಯ 15 ಪವನ್ ಚಿನ್ನಾಭರಣ ಕಳವುಗೈಯ್ಯಲಾಗಿದ್ದು, ಸುಮಾರು 25 ಲಕ್ಷ ರೂ . ಅಂದಾಜಿಸಲಾಗಿದೆ. ಇದಲ್ಲದೆ ಬ್ಯಾಗ್ ನಲ್ಲಿದ್ದ ಎ ಟಿ ಎಂ ಕಾರ್ಡ್, ಪಾಸ್ ಪೋರ್ಟ್ ಹಾಗೂ ಇನ್ನಿತರ ವಸ್ತುಗಳು ಕಳವು ಮಾಡಲಾಗಿದೆ.
ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ರೈಲಿನಲ್ಲಿ ಚೆನ್ನೈ ನಿವಾಸಿಯೊಬ್ಬರ 25 ಪವನ್ ಚಿನ್ನಾಭರಣ ಮತ್ತು ಡೈಮಂಡ್ನ್ನು ಕೂಡಾ ಕಳವು ಮಾಡಲಾಗಿದೆ. ಎರಡು ಕಳವು ಕೃತ್ಯಗಳು ಒಂದೇ ತಂಡ ನಡೆಸಿರಬಹುದು ಎಂದು ಶಂಕಿಸಲಾಗಿದೆ .
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.