ಕಾಸರಗೋಡು, ಫೆ.08 (Daijiworld News/PY): ಕೊರೋನಾ ವೈರಸ್ ತಡೆ ಕುರಿತಾಗಿ ಅವಲೋಕನ ಸಭೆ ನಡೆಸಲು ಫೆ.9 ಭಾನುವಾರ ಬೆಳಿಗ್ಗೆ 11 ಗಂಟೆಗೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ಹೊಸದುರ್ಗ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವೈರಸ್ ತಡೆ ಕುರಿತು ರಚಿಸಿದ ಹದಿನೈದು ಮಂದಿಯ ತಂಡದ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದುವರೆಗೆ 22 ಮಂದಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು , 19 ಮಂದಿಯ ತಪಾಸಣಾ ವರದಿ ಲಭಿಸಿದೆ. ಮೂವರು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ. ಈ ನಡುವೆ ಕೊರೋನಾ ವೈರಸ್ ಸೋಂಕಿತ ವಿದ್ಯಾರ್ಥಿಯ ಸ್ಥಿತಿ ಮತ್ತಷ್ಟು ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ .