ಕುಂದಾಪುರ, ಫೆ 09 (Daijiworld News/MB) : ಬೀಜಾಡಿಯ ಗ್ರಾಮದ ಗೋಯಾಡಿಬೆಟ್ಟು ನಿವಾಸಿ ಹರೀಶ್ ಬಂಗೇರ ಅವರು ಸೌದಿ ಪೊಲೀಸರ ವಶದಲ್ಲಿದ್ದು ಅವರು ಯಾವುದೇ ಧರ್ಮಕ್ಕೆ ಮತಾಂತರಗೊಂಡಿಲ್ಲ. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಬೇಡಿ ಎಂದು ಹರೀಸ್ ಪತ್ನಿ ಸುಮನ ಮನವಿ ಮಾಡಿದ್ದಾರೆ.
ಕಲೆವು ದಿನಗಳ ಹಿಂದೆ ಸೌದಿ ಅರೇಬಿಯಾದ ದೊರೆ ಹಾಗೂ ಮೆಕ್ಕಾ ಮಸೀದಿಯ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಎಂಬ ಆರೋಪದ ಮೇಲೆ ಹರೀಶ್ ಅವರನ್ನು ಪೊಲೀಸರು ಬಂಧನ ಮಾಡಿದ್ದರು.
ಹರೀಶ್ ಅವರು ಅನ್ಯ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಲಾಗುತ್ತಿದೆ. ಇದರಿಂದ ನಾವು ಮಾನಸಿಕವಾಗಿ ಕುಗ್ಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಹಾಗೂ ಸರಕಾರ ಕ್ರಮ ತೆಗೆದುಕೊಂಡು ಶೀಘ್ರವೇ ಹರೀಶ್ ಅವರನ್ನು ಭಾರತಕ್ಕೆ ಕರೆತರಬೇಕೆಂದು ವಿನಂತಿಸಿದ್ದಾರೆ.