ಬೆಳ್ತಂಗಡಿ, ಫೆ 9 (Daijiworld News/MSP): ಕಳಿಯ ಗ್ರಾಮದ ಗೇರುಕಟ್ಟೆ ಕೊರಂಜ ಶಾಲೆ ಬಳಿ ಟಿಪ್ಪರ್ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಅಮ್ಮುಂಜೆ ಗ್ರಾಮದ ಬೆಂಜನಪದವು ನಿವಾಸಿ ಮುಸ್ತಾಫ (35) ವಿರುದ್ಧ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಶಾರದಾ (57) ಮೃತಪಟ್ಟಿದ್ದು, ಉಳಿದ 6 ಮಂದಿ ಹಾಗೂ ಮಗು ಗಂಭೀರ ಗಾಯಗೊಂಡಿದ್ದರು. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯವು ಪ್ರಕರಣ ಪರಿಶೀಲಿಸಿ ಕಲಂ 279ರಂತೆ 6 ತಿಂಗಳು ಶಿಕ್ಷೆ 500ರೂ. ದಂಡ ತಪ್ಪಿದಲ್ಲಿ 15 ದಿವಸ ಶಿಕ್ಷೆ, 337ಕ್ಕೆ 6ತಿಂಗಳು 500ರೂ. ದಂಡ, 338 ಕ್ಕೆ 6 ತಿಂಗಳು ಶಿಕ್ಷೆ ಸಾವಿರ ರೂ. ದಂಡ, 347(ಎ)ಯಂತೆ ಒಂದು ವರ್ಷ ಶಿಕ್ಷೆ 500 ರೂ. ದಂಡ, ತಪ್ಪಿದಲ್ಲಿ 15ದಿನ ಶಿಕ್ಷೆ, 346,196 ಐಎಂಎ ಕಾಯ್ದೆಯಂತೆ 500 ರೂ. ದಂಡ ವಿಧಿಸಿ ಬೆಳ್ತಂಗಡಿ ಪ್ರಥಮ ದರ್ಜೆ ನ್ಯಾಯಾಧೀಶರಾದ ಕೆ.ಎಂ.ಆನಂದ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಜಿ.ಕೆ.ಕಿರಣ್ ವಾದಿಸಿದ್ದರು.