ಬೆಂಗಳೂರು ಫೆ 06 : ನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಮತ್ತಿತರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕವಿತಾ ಸನಿಲ್, ಪೊಲೀಸ್ ಆಯುಕ್ತ ಟಿ ಆರ್ ಸುರೇಶ್, ಪಾಂಡೇಶ್ವರ ಇನ್ಸ್ಪೆಕ್ಟರ್ ಬೆಳ್ಳಿಯಪ್ಪ, ಮನಪಾ ಆರೋಗ್ಯಾಧಿಕಾರಿ ಡಾ ಮಂಜಯ್ಯ ಶೆಟ್ಟಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಸ್ಕಿಲ್ಗೇಮ್ ಸೆಂಟರ್ ವಿರುದ್ಧ ಜರಗಿಸಲಾಗುವ ಎಲ್ಲಾ ಕ್ರಮಗಳಿಗೆ ತಡೆಯಾಜ್ಞೆ ನೀಡಿದೆ. ಮಂಗಳೂರಿನಲ್ಲಿ ಅನಧಿಕೃತ ಸ್ಕಿಲ್ ಗೇಮ್ಗಳಿವೆ ಎಂದು ಮಂಗಳೂರು ಮೇಯರ್ ದಾಳಿ ನಡೆಸಿ ಬೀಗ ಜಡಿದಿದ್ದರು. ಈ ಹಿನ್ನೆಲೆಯಲ್ಲಿ ಮಾಲಕರು ಹೈಕೋರ್ಟ್ ಮೆಟ್ಟಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೀಗ ನಾಲ್ವರಿಗೆ ನೊಟೀಸ್ ಜಾರಿ ಮಾಡಿದೆ. ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಕವಿತಾ ಸನಿಲ್, ಜಿಲ್ಲಾ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಿದೆ. ಇದೀಗ ಪ್ರಕರಣ ಹೈಕೋರ್ಟ್ಗೆ ಹೋಗಿರಬಹುದು. ಆದರೆ ನೊಟೀಸ್ ನಮ್ಮ ಕೈಸೇರಿಲ್ಲ ಅದೇನಿದ್ದರೂ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.