ಉಪ್ಪಿನಂಗಡಿ, ಫೆ.09 (Daijiworld News/PY): ಕಿಂಗ್ಡಮ್ ವಿಶ್ವವಿದ್ಯಾಲಯ ಬಹರೇನ್ ಇದರ ಸಹ ಪ್ರಾಧ್ಯಾಪಕರಾದ ಡಾ.ಹಬೀಬ್ ಉರ್ ರಹ್ಮಾನ್ ಅವರ "ಇನ್ಫ್ಲುಯೆನ್ಸ್ ಆಫ್ ಕ್ವಾಲಿಟಿ ಆಫ್ ವರ್ಕ್ ಲೈಫ್,ಇಗೋ ಸ್ಟೇಟ್ಸ್ ಆ್ಯಂಡ್ ಜಾಬ್ ಆ್ಯಟಿಟ್ಯೂಡ್ ಆನ್ ಆರ್ಗನೈಸೇಶನಲ್ ಕಮಿಟ್ಮೆಂಟ್ ಆ್ಯಂಡ್ ಪ್ರೊಡಕ್ಟಿವಿಟಿ ಆಫ್ ಬ್ಯಾಂಕ್ ಎಂಪ್ಲಾಯೀಸ್" ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ಬೆಳಗಾವಿಯಿಂದ ಡಾಕ್ಟರೇಟ್ ಲಭಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಸರ್ಚ್ ಗೈಡ್ ಫ್ರೊ.ರಶ್ಮಿ ಕೋಡಿಕಲ್ ಅವರ ಮಾಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಲಾಗಿತ್ತು.
ಲಂಡನ್ನಿನ ಹೈಯರ್ ಎಜುಕೇಶನ್ ಅಕಾಡೆಮಿಯಲ್ಲಿ ಫೆಲೋ ಆಗಿರುವ ಹಬೀಬ್ ಉರ್ ರಹ್ಮಾನ್ ಅವರು ಉಪ್ಪಿನಂಗಡಿಯ ಯೂಸೂಫ್ ಹಾಗೂ ಆಯಿಷಾ ದಂಪತಿಗಳ ಪುತ್ರ.
ಹಬೀಬ್ ಉರ್ ರಹ್ಮಾನ್ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಮಂಗಳೂರಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂ. ಬಿ. ಎ ಪದವಿಯನ್ನು ಪಡೆದಿರುತ್ತಾರೆ.