ಮೂಡುಬಿದಿರೆ, ಫೆ 10 (DaijiworldNews/SM): ಮೂರ್ತಿ ಮತ್ತು ಪೀಠವನ್ನು ಗಟ್ಟಿಗೊಳಿಸುವ ಕಾರ್ಯ ಬ್ರಹ್ಮಕಲಶಾಭಿಷೇಕದಿಂದ ಸಾಧ್ಯವಾಗುತ್ತದೆ. ಹೊಸಮಠಗಳನ್ನು ಗುರುಪರಂಪರೆಯ ಭಾಗವೆಂದು ಪರಿಗಣಿಸಬೇಕು. ಆಗ ಭಾರತೀಯ ಸಂಸ್ಕೃತಿ ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯ. ಕರಿಂಜೆಯ ಈ ನೂತನ ದೇವಾಲಯದಲ್ಲಿ ಹೊಸ ಮೂರ್ತಿಯೊಂದಿಗೆ ಹೊಸಪೀಠವನ್ನು ಸ್ವೀಕರಿಸೋಣ ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದಲ್ಲಿ ನೂತನ ಗರ್ಭಗುಡಿಯಲ್ಲಿ ಶ್ರೀ ದೇವರ ಪುನರ್ಪ್ರತಿಷ್ಠೆ ಸಹಸ್ರ ಬ್ರಹ್ಮಕಲಶಾಭಿಷೇಕದಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮಾಣಿಲ ಶ್ರೀ ಧಾಮದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎನ್ ಶಂಕರಪ್ಪ ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜೆ ಸುಧೀರ್ ಹೆಗ್ಡೆ ಬೈಲೂರು, ಬ್ರಹ್ಮಕಲಶೊತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುದರ್ಶನ ಎಂ, ಉಪಾಧ್ಯಕ್ಷ ಬಾಹುಬಲಿ ಪ್ರಸಾದ್, ಉದ್ಯಮಿ ಶ್ರೀಪತಿ ಭಟ್, ಪುರಸಭಾ ಸದಸ್ಯೆ ಜಯಶ್ರೀ ಕೇಶವ, ಬೆಂಗಳೂರಿನ ಉದ್ಯಮಿ ಜಯರಾಮ ಶೆಟ್ಟಿ, ಭಾಸ್ಕರ ಧರ್ಮಸ್ಥಳ, ಮುಂಬೈ ಉದ್ಯಮಿ ಶಿವರಾಮ ಯು ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದರ್ಶನ ಎಂ ಸ್ವಾಗತಿಸಿದರು. ರಾಂಕುಮಾರ್ ಮಾರ್ನಾಡು, ಹರೀಶ್ ಶೆಟ್ಟಿ ಮಜಲೋಡಿ ನಿರ್ವಹಿಸಿದರು.