ಕೊಕ್ಕಡ ಫೆ 06 : ಕಾಮಗಾರಿಯೊಂದರ ಬಿಲ್ ಪಾಸ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಒ, ಜ 06 ರ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಕ್ಕಡ ಗ್ರಾಮ ಪಂಚಾಯತ್ ಗೆ ಏಕಾಏಕಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪಿಡಿಒ ಪುರುಷೋತ್ತಮ ಹಾಗೂ ಅಧ್ಯಕ್ಷ ಸೆಬಾಸ್ಟಿಯನ್ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಸ್ಥಳೀಯ ಗುತ್ತಿಗೆದಾರ ಉಮರ್ ಎಂಬವರು ಇವರಿಬ್ಬರ ವಿರುದ್ದ ಭ್ರಷ್ಟಚಾರ ಆರೋಪ ಮಾಡಿದ್ದರು. ಆರೋಪಿಗಳು ಕಾಮಗಾರಿಯ ಬಿಲ್ ಪಾಸ್ ಮಾಡಲು ಮೂವತ್ತು ಸಾವಿರ ಲಂಚ ಕೇಳಿದ್ದರು ಎಂದು ಉಮರ್ ಎಸಿಬಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಡಿವೈಎಸ್ ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ದಾಳಿ ನಡೆದಿದೆ. ಗುತ್ತಿಗೆದಾರ ಉಮರ್ ಇವರಿಗೆ ಜೀವಬೇದರಿಕೆ ಇದ್ದು ಅವರು ಈ ಸಂಬಂಧ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಅಧ್ಯಕ್ಷ ಮತ್ತು ಪಿಡಿಓ ಅವರಿಗೆ ಫೆ. 22 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.