ಕಾಸರಗೋಡು, ಫೆ 11 (Daijiworld News/MSP): ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. 101 ಮಂದಿಯ ತಪಾಸಣೆ ನಡೆಸಿದಾಗ ಒಂದು ಓರ್ವನಲ್ಲಿ ಸೋಂಕು ಪತ್ತೆಯಾಗಿದೆ.
22 ಮಂದಿಯ ರಕ್ತದ ಮಾದರಿಯನ್ನು ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಪೈಕಿ 21 ಪ್ರಕರಣಗಳು ನೆಗೆಟಿವ್ ಆಗಿದೆ. ಒಂದು ಪ್ರಕರಣ ಪಾಲಿಟಿವ್ ಆಗಿದೆ. ಆದರೆ 101 ಮಂದಿಯ ನಿಗಾ ವಹಿಸಲಾಗಿದೆ. ಇವರು ಚೈನಾ ಮತ್ತು ಇತರ ದೇಶಗಳಿಂದ ಬಂದವರಾಗಿದ್ದು, ಇವರು 28 ದಿನಗಳ ಕಾಲ ಮನೆಯಲ್ಲಿ ಇರಬೇಕು, ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಬೇಕು ಎಂದು ಆರೋಗ್ಯ ಉಪ ನಿರ್ದೇಶಕ ಡಾ.ರಾಮ್ ದಾಸ್ ಎ.ವಿ ತಿಳಿಸಿದ್ದಾರೆ .
ಈ ನಡುವೆ ಸೋಂಕು ಪತ್ತೆಯಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಚೇತರಿಸಿದ್ದು, ಎರಡು ಬಾರಿ ನೆಗೆಟಿವ್ ವರದಿ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.