ಪುತ್ತೂರು ಫೆ 07: ಇಲ್ಲಿನ ಮಿತ್ತೂರಿನ ಸಮೀಪ ರೈಲ್ವೇ ಮೇಲ್ಸೇತುವೆಗೆ ಮಂಗಳೂರಿನಿಂದ ಕಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದು ಫೆ 7ರ ಬುಧವಾರ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ರೈಲ್ವೆ ಮೇಲ್ಸೇತುವೆ ಬಿರುಕು ಬಿಟ್ಟಿದ್ದು ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೈಲ್ವೆ ಅಧಿಕಾರಿಗಳು ಬಂದು ಸೇತುವೆಯ ಸಂಪೂರ್ಣ ತಪಾಸಣೆಯ ಮಾಡಿದ ಬಳಿಕವಷ್ಟೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಇನ್ನು ಅಪಘಾತದಲ್ಲಿ ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಇನ್ನು ಕಂಟೇನರ್ ಲಾರಿ ಅಪಘಾತದ ಬಳಿಕ ಸಂಪೂರ್ಣವಾಗಿ ಮಿತ್ತೂರು ರಸ್ತೆಯಲ್ಲಿ ಟ್ರಾಪಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ದಟ್ಟನೆ ನಿವಾರಣೆಗೆ ಕ್ರಮಕೈಗೊಳ್ಳುತ್ತಿದ್ದಾರೆ.