ಬಂಟ್ವಾಳ, ಫೆ.11 (DaijiworldNews/PY): ಬಂಟ್ವಾಳ ತಾಲೂಕಿನ ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 25ನೇ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅಮೃತಹಸ್ತದಿಂದ ಬಿಡುಗಡೆಗೊಳಿಸಿದರು.
2020ರ ಫೆಬ್ರವರಿ 26 ಮತ್ತು 27ರಂದು ಎರಡು ದಿನಗಳ ಕಾಲ ಬಾಚಕೆರೆ ಬೆಳ್ಳಿಹಬ್ಬದ ಸಂಭ್ರಮ ನಡೆಯಲಿದ್ದು, 26ರಂದು ಏಕಾಹ ಭಜನೆ ಮತ್ತು 27ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು, ರಾಧಾಕೃಷ್ಣ ರೈ ಮಾವಿನಕಟ್ಟೆ, ಚಂದ್ರಹಾಸ ಶೆಟ್ಟಿ ಹೊಳ್ಳಾರಗುತ್ತು, ಪುರುಷೋತ್ತಮ ಪೂಜಾರಿ ಮೊಗರು ಮಜಲು, ಜಯನಾಯ್ಕ ಅಂತರ, ಎಲ್.ಕೆ. ಧರಣ್ ಮಾಣಿ, ಬಾಚಕೆರೆ ಭ್ರಮರಾಂಬಿಕ ಸೇವಾ ಸಂಘದ ಅಧ್ಯಕ್ಷ ಓಬಯ ಕಜೆಕ್ಕಾರು, ಇಳಿಯೂರು ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಲಕ್ಷೀನಾರಾಯಣ ನೇಲ್ಯಪಲ್ಕೆ, ನಿರಂಜನ ಬಾಚಕೆರೆ, ಪುರುಷೋತ್ತಮ ಕಾಯರ್ಪಲ್ಕೆ, ಸುಂದರ ಬಾಚಕೆರೆ, ದಾಮೋದರ ತೋಡಾರು, ಬಾಲಕೃಷ್ಣ ಕೊಟ್ಟುಂಜ, ಮಂಜಪ್ಪ ವಗ್ಗ ಮೊದಲಾದವರು ಉಪಸ್ಥಿತರಿದ್ದರು.