ಕುಂದಾಪುರ, ಫೆ 07 : ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ನೇತೃತ್ವದಲ್ಲಿ ಬ್ರಹ್ಮಾವರ ಸಮೀಪದ ಹಂದಾಡಿಯಲ್ಲಿ ಮರಳು ದಕ್ಕೆಗೆ ದಾಳಿ ನಡೆಸಿದ್ದಾರೆ. ಹೆಚ್ಚಿನ ಎಲ್ಲಾ ಮರಳು ದಕ್ಕೆ ಮಾಲೀಕರು ಲೈಸೆನ್ಸ್ದಾರರಾಗಿದ್ದು ತಾಂತ್ರಿಕ ಕಾರಣದಿಂದ ಟ್ರಿಪ್ ಲೈಸೆನ್ಸ್ ರದ್ದಾಗಿತ್ತು. ಆದರೂ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ಕುಂದಾಪುರ ಎಸಿ ಭೂಬಾಲನ್ ಬೆಳ್ಳಂಬೆಳಗ್ಗೆ ಸ್ಥಳಕ್ಕೆ ತಂಡದೊಂದಿಗೆ ದಾಳಿ ನಡೆಸಿ 25 ದೋಣಿ, 9 ಟಿಪ್ಪರ್, 61 ಮಂದಿ ಉತ್ತರ ಪ್ರದೇಶ ಮೂಲದ ಕಾರ್ಮಿಕರನ್ನ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ದಾಳಿ ಸಂದರ್ಭ ಕರುಣಾಕರ್ ಶೆಟ್ಟಿ ಎನ್ನುವ ಲೈಸೆನ್ಸ್ದಾರ ಸ್ಥಳದಿಂದ ಪರಾರಿಯಾಗಿದ್ದು ಅವನನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸುಮಾರು 25ಕ್ಕೂ ಅಧಿಕ ಮರಳು ತುಂಬಿದ ದೋಣಿಗಳಿದ್ದು ಅದರಲ್ಲಿ ಮರಳಿನ ಭಾರಕ್ಕೆ ಕೆಲವು ದೋಣಿಗಳು ಮುಳುಗಡೆಗೊಂಡಿದೆ. ಬ್ರಹ್ಮಾವರ ವೃತ್ತನಿರೀಕ್ಷಕ ಶ್ರೀಕಾಂತ್, ಬ್ರಹ್ಮಾವರ ಠಾಣೆ ಪಿಎಸ್ಐ ಮಧು, ಗಣಿ ಇಲಾಖೆಯ ಅಧಿಕಾರಿ ಮಹದೇವಪ್ಪ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.