ವಿಟ್ಲ, ಫೆ 12 (DaijiworldNews/SM): ದಿನಸಿ ಸಾಮಾಗ್ರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ನಡೆದಿದೆ.
ವೀರಕಂಭದ ಹಮೀದ್ ಎಂಬವರ ದಿನಸಿ ಸಾಮಾಗ್ರಿ ಅಂಗಡಿಗೆ ರಾತ್ರಿ ಸುಮಾರು 9.30 ಗಂಟೆಯ ವೇಳೆಗೆ ಬೆಂಕಿ ತಗುಲಿ ಅಂಗಡಿ ಭಾಗಶಃ ಬೆಂಕಿಗೆ ಆಹುತಿಯಾಯಿತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆಯಾ ಅಥವಾ ಯಾವ ಕಾರಣದಿಂದ ಎಂಬುದು ತನಿಖೆಯ ಬಳಿಕವಷ್ಟೆ ತಿಳಿಯಬೇಕಾಗಿದೆ.
ಬಂಟ್ವಾಳ ಅಗ್ನಿಶಾಮಕ ದಳದ ಎರಡು ವಾಹನಗಳು ಹಾಗೂ ಸಿಬ್ಬಂದಿ ಗಳು ಬೆಂಕಿ ನಂದಿಸಿದ್ದಾರೆ. ಇನ್ನು ಅಂಗಡಿಗೆ ತಾಗಿಕೊಂಡೆ ಇವರ ಮನೆಯಿರುವುದರಿಂದ ಸ್ವಲ್ಪ ಹೊತ್ತು ಅಂತಕದ ವಾತಾವರಣ ನಿರ್ಮಾಣವಾಯಿತು.
ಸಕಾಲದಲ್ಲಿ ಊರಿನ ಜನರ ಸಹಕಾರ ಹಾಗೂ ಅಗ್ನಿಶಾಮಕ ದಳವರ ಕಾರ್ಯವೈಖರಿ ಅನಾಹುತ ತಡೆಯಲು ಸಹಕಾರಿಯಾಗಿದೆ. ಆದರೆ ಘಟನೆಯಿಂದ ಯಾವುದೇ ಸಮಸ್ಯೆ ಗಳು ಅಗದಂತೆ ವಿಟ್ಲ ಠಾಣಾ ಎಸ್. ಐ. ವಿನೋದ್ ಹಾಗೂ ಅವರ ಸಿಬ್ಬಂದಿ ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸೂಕ್ತ ವಾದ ವ್ಯವಸ್ಥೆ ಗಳನ್ನು ಕಲ್ಪಿಸಿದ್ದಾರೆ.