ಮಂಗಳೂರು, ಫೆ 14 (Daijiworld News/MB) : ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ಇಬ್ಬರು ಪೈಲೆಟ್ಗಳ ಪರವಾನಗಿಯನ್ನು ನಾಲ್ಕು ತಿಂಗಳುಗಳ ಕಾಲ ಅಮಾನತು ಮಾಡಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಗುರುವಾರ ನಿರ್ಧಾರ ಮಾಡಿದೆ.
ಸಾಂದರ್ಭಿಕ ಚಿತ್ರ
2019ರ ಅಕ್ಟೋಬರ್ 31 ರಂದು ದುಬೈನಿಂದ ಮಂಗಳೂರು ವಿಮಾ ನಿಲ್ದಾಣಕ್ಕೆ ಆಗಮಿಸಿದ್ದ ಬೋಯಿಂಗ್ 737 ವಿಮಾನವನ್ನು ಸಮರ್ಪಕ ರೀತಿಯಲ್ಲಿ ಲ್ಯಾಂಡಿಂಗ್ ಮಾಡಿರಲಿಲ್ಲ.
ಈ ಸಂದರ್ಭದಲ್ಲಿ ವಿಮಾನ ರನ್ವೇನಿಂದ ಜಾರಿದ್ದು ಮಾತ್ರವಲ್ಲದೇ, ಅಲ್ಲಿದ್ದ ಮೂರು ಎಡ್ಜ್ ಲೈಟ್ಗಳಿಗೆ ಹಾನಿಯಾಗಿದ್ದವು.
ಈ ಘಟನೆ ನಡೆದ ದಿನದಿಂದ ಈ ಅಮಾನತು ಆದೇಶ ಅನ್ವಯವಾಗಲಿದೆ ಎಂದು ಮಹಾನಿರ್ದೇಶನಾಲಯ ತಿಳಿಸಿದೆ.