ಉಪ್ಪಳ, ಫೆ 14 (Daijiworld News/MB) : ಉಪ್ಪಳ ಅಗ್ನಿಶಾಮಕ ದಳದ ಜಲರಕ್ಷಾ ಯೋಜನೆಯಂಗವಾಗಿ ಪರಿಸರದ ಶಾಲಾ ಮಕ್ಕಳಿಗೆ ಉಪ್ಪಳ ಅಗ್ನಿಶಾಮಕ ದಳದ ಸಿಬಂದಿಗಳು ಈಜು ತರಬೇತಿಯನ್ನು ನೀಡಿದರು.
ಕುಕ್ಕಾರು ಸರಕಾರಿ ಮತ್ತು ಎ ಜೆ .ಐ ಶಾಲೆಯ 58 ರಷ್ಟು ವಿದ್ಯಾರ್ಥಿಗಳಿಗೆ ಈಜು ತರಬೇತಿ ನೀಡಲಾಯಿತು.
ಇತ್ತೀಚಿನ ದಿನಗಳಲ್ಲಿ ಜಲ ದುರಂತಗಳು ಹೆಚ್ಚುತ್ತಿವೆ . ಪ್ರಮುಖವಾಗಿ ಮಕ್ಕಳು ಹೊಳೆ, ಕೆರೆ, ಬಾವಿ ಹೀಗೆ ಹಲವೆಡೆ ನೀರಿಗೆ ಬಿದ್ದು ಬಲಿಯಾಗುತ್ತಿರುವ ಘಟನೆಗೆಳು ನಡೆಯುತ್ತಲೇ ಇದೆ . ಈ ಹಿನ್ನಲೆಯಲ್ಲಿ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾ ಕೌನ್ಸಿಲ್ ಸಹಯೋಗದೊಂದಿಗೆ ಈ ಯೋಜನೆ ಕೈಗೊಂಡಿತ್ತು.
ಕಳೆದ ನವಂಬರ್ ಹದಿನಾರರಿಂದ ತರಬೇತಿ ನೀಡುವ ಕಾರ್ಯ ಆರಂಭಿಸಲಾಗಿತ್ತು . ರಜಾ ದಿನಗಳಲ್ಲಿ ತರಬೇತಿ ನೀಡಲಾಗುತಿತ್ತು . ಉಪ್ಪಳ ಪತ್ವಾಡಿ ಹೊಳೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ೫೮ ವಿದ್ಯಾರ್ಥಿಗಳಲ್ಲಿ ೩೫ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು
ಉಳಿದ ಶಾಲೆಗಳಿಗೂ ಈ ಯೋಜನೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಇದೀಗ ಉಪ್ಪಳ ಪರಿಸರದ ಶಾಲಾ ಮಕ್ಕಳಿಗೆ ಈಜು ತರಬೇತಿ ನೀಡುವ ಮೂಲಕ ಅಗ್ನಿಶಾಮಕ ದಳದ ಸಿಬಂದಿಗಳು ಗಮನ ಸೆಳೆದಿದ್ದಾರೆ.