ಕಾಸರಗೋಡು, ಜ 15 (DaijiworldNews/SM): ಕೊರೋನಾ ಸೋಂಕುಗೆ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಾಸರಗೋಡಿನ ವಿದ್ಯಾರ್ಥಿ ಶೀಘ್ರ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ರಕ್ತದ ಮಾದರಿ ಪರೀಕ್ಷಾ ವರದಿ ಲಭಿಸಿದ್ದು, ನೆಗೆಟಿವ್ ವರದಿ ಲಭಿಸಿದ್ದರಿಂದ ಕೊರೋನಾ ವೈರಸ್ ನಿಂದ ಮುಕ್ತವಾಗಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಬಳಿಕ ಮನೆಯಲ್ಲಿಯೇ ಕೆಲ ದಿನಗಳ ಕಾಲ ವಿದ್ಯಾರ್ಥಿಯ ನಿಗಾ ಇರಿಸಲಾಗುತ್ತೆ ಎಂದು ತಿಳಿದು ಬಂದಿದೆ.
ಚೀನಾದಿಂದ ಆಗಮಿಸಿದ್ದ ಕಾಸರಗೋಡಿನ ವಿದ್ಯಾರ್ಥಿಯನ್ನು ತಪಾಸಣೆ ನಡೆಸಿದಾಗ ಕೊರೋನಾ ಸೋಂಕು ಕಂಡು ಬಂದಿತ್ತು. ಫೆಬ್ರವರಿ ನಾಲ್ಕರಂದು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಇದುವರೆಗೆ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ. ಶಂಕಿತ ನೂರಕ್ಕೂ ಅಧಿಕ ಮಂದಿಯ ನಿಗಾ ಇರಿಸಲಾಗಿತ್ತು. ತಪಾಸಣೆಗೆ ಕಳುಹಿಸಿದ್ದ ಓರ್ವನಲ್ಲಿ ಮಾತ್ರ ಸೋಂಕು ಪತ್ತೆಯಾಗಿತ್ತು.