ವಿಟ್ಲ, ಜ 15 (DaijiworldNews/SM): ಬಸ್ ನಿಲ್ಲಿಸಿ ತೊಳೆಯುತ್ತಿದ್ದಾಗ ದಿಢೀರನೆ ಮುಂದಕ್ಕೆ ಚಲಿಸಿ ಬಸ್ ಚರಂಡಿಗೆ ವಾಲಿ ನಿಂತ ಘಟನೆ ವಿಟ್ಲದ ಬಾಕಿಬಾರ್ ಪೆಟ್ರೋಲ್ ಪಂಪ್ ನಲ್ಲಿ ಸಂಭವಿಸಿದೆ.
ವಿಟ್ಲದ ಕಾಸರಗೋಡು ರಸ್ತೆಯ ಎಂ.ಆರ್ ನಾಯಕ್ ಪೆಟ್ರೋಲ್ ಪಂಪ್ ನಲ್ಲಿ ಎಂದಿನಂತೆ ಬಸ್ಸನ್ನು ನಿಲ್ಲಿಸಿ ನಿರ್ವಾಹಕ ತೊಳೆಯುತ್ತಿದ್ದ ವೇಳೆ ನ್ಯೂಟ್ರಲ್ ನಲ್ಲಿ ಬಸ್ ನೇರವಾಗಿ ರಸ್ತೆಯನ್ನು ದಾಟಿ ಪಕ್ಕದ ಚರಂಡಿಗೆ ವಾಲಿ ನಿಂತಿದೆ.
ತಾಂತ್ರಿಕ ಸಮಸ್ಯೆಯಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬಸ್ ರಸ್ತೆ ಮಧ್ಯದಲ್ಲಿ ಅಡ್ಡವಾಗಿ ನಿಂತ ಪರಿಣಾಮ ಕಾಸರಗೋಡು ರಸ್ತೆಯಲ್ಲಿ ಸುಮಾರು ಸಮಯಗಳವರೆಗೆ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು. ಬಳಿಕ ವಿಟ್ಲ ಪೊಲೀಸರು ಭೇಟಿ ನೀಡಿ ವಾಹನ ಸಂಚಾರ ಸುಗಮಗೊಳಿಸಿದರು.