ಕೋಟ, ಫೆ 17 (Daijiworld News/MSP): ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿನ ಪುಷ್ಕರಣಿಗೆ 22ವರ್ಷದ ಯುವಕನೊರ್ವ ಈಜುಲು ಹೋಗಿ ಮೃತ ಪಟ್ಟ ಘಟನೆ ಭಾನುವಾರ ನಡೆದಿದೆ.
ಮಂಡ್ಯ ಮೂಲದ ಬೆಂಗಳೂರು ಬಿದ್ರಹಳ್ಳಿ ನಿವಾಸಿ ಪವನ್ ಎಂದು ಗುರುತಿಸಲಾಗಿದ್ದು ಉಡುಪಿ ಕೃಷ್ಣ ಮಠಕ್ಕೆ ತೆರಳಿ ಭಾನುವಾರ ಬೆಳಿಗ್ಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಕ್ಕೆ ದರ್ಶನಕ್ಕೆಂದು ನೀರಿಗೆ ಇಳಿದು ಈಜಲು ಪ್ರಯತ್ನಿಸಿದ್ದು ನೆಲೆಕಳೆದುಕೊಂಡು ಮೃತರಾಗಿದ್ದಾರೆ.
ಸೋಮವಾರ ಇಂಜಿನಿಯರಿಂಗ್ ಕೆಲಸಕ್ಕೆ ಸೇರಬೇಕಾಗಿದ್ದ ಹುಡುಗ
ಸೋಮವಾರ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕೆಲಸಕ್ಕೆ ಸೇರಬೇಕಾಗಿದ್ದ ಈ ಹುಡುಗನ ಹಣೆ ಬರಹ ಭಾನುವಾರವೇ ವಿಧಿ ಅಂತ್ಯ ಮಾಡಿತು.
ಒಟ್ಟು ಮೂವತ್ತು ಜನ ದೇವಳದ ದರ್ಶನಕ್ಕೆ ಹೊರಟವರು
ಒಟ್ಟು ಮೂವತ್ತು ಜನ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿರುವ ದೇವಳದ ದರ್ಶನಕ್ಕೆಂದು ಹೊರಟು ಉಡುಪಿಯ ಕೃಷ್ಣ ಮಠ ದರ್ಶನ ಪಡೆದು ನಂತರ ಭಾನುವಾರ ಪೂರ್ವಾಹ್ನ 5ಗ.ಸಾಲಿಗ್ರಾಮಕ್ಕೆ ಬಂದಿಳಿದರು. ಅದರಲ್ಲಿಒರ್ವ ಹುಡುಗ ಪವನ್ ಎಂಬಾತ ಈಜಲು ಪ್ರಯತ್ನಿಸಿದ್ದು ನೆಲೆ ಕಳೆದು ವಿಧಿಯ ಸೆಳೆತಕ್ಕೆ ಬಲಿಯಾಗಿದ್ದಾನೆ.
ಹರಕೆ ತಿರಿಸಲು ಉರುಳು ಸೇವೆ
ತನ್ನ ಮಗನಿಗೆ ಒಳ್ಳೆಯ ಉದ್ಯೋಗ ಸಿಗಬೇಕೆಂಬ ತುಡಿತದಿಂದ ಸಾಲಿಗ್ರಾಮ ಶ್ರೀಗುರುನರಸಿಂಹನಲ್ಲಿ ಉರುಳು ಸೇವೆಗೆ ಕುಟುಂಬ ಅಣಿಯಾಗಿ ನಂತರ ಸ್ನಾನಕ್ಕೆಂದು ಇಳಿದ ಪವನ್ ವಿಧಿಯಾಟಕ್ಕೆ ಸಿಲುಕಿದನು. ಕೋಟ ಆರಕ್ಷರ ಸಹಕಾರ ಪಡೆದು ಅಗ್ನಿಶಾಮಕ ದಳದವರಿಂದ ಶವವನ್ನು ಮೇಲಕ್ಕೆತ್ತಲಾಗಿದೆ.ಕೋಟದ ಜೀವನ್ ಮಿತ್ರ ಆಂಬ್ಯುಲೇನ್ಸ್ ಮೂಲಕ ಕೋಟ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ತಂದು ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ಬೆಂಗಳೂರಿಗೆ ಕಂಡ್ಯೊಯ್ಯಲಾಯಿತು. ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.