ಕಾಸರಗೋಡು, ಫೆ 17 (Daijiworld News/MSP) : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಲ್ಯೊಟ್ನ ಕೃಪೇಶ್ ಮತ್ತು ಶರತ್ ಲಾಲ್ರ ಕೊಲೆಗೆ ಇಂದಿಗೆ ಒಂದು ವರ್ಷವಾಗುತ್ತಿದ್ದು , ಈ ಹಿನ್ನಲೆಯಲ್ಲಿ ಪೆರಿಯ ಪರಿಸರದಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.
ಇಂದು ಪೆರಿಯದಲ್ಲಿ ಸಂಸ್ಮರಣೆ ಹಾಗೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ತೆಗೆದುಕೊಳ್ಳಲು ಪೊಲೀಸರು ತೀರ್ಮಾನ ತೆಗೆದುಕೊಂಡಿದ್ದಾರೆ.
2019 ರ ಫೆ. 17ರಂದು ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಪೀತಾಂಬರನ್ ನೇತೃತ್ವದ ತಂಡವು ಕೊಚ್ಚಿ ಕೊಲೆಗೈದಿತ್ತು. ಪ್ರಕರಣವು ಕ್ರೈಂ ಬ್ರಾಂಚ್ ತನಿಖೆ ನಡೆಸಿತ್ತು. ಬಳಿಕ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋಗಿದ್ದು ಇದರಿಂದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.
ಆದರೆ ಕೇರಳ ಸರಕಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರಿಂದ ತನಿಖೆ ಸಿಬಿಐ ಕೈಗೆತ್ತಿಕೊಂಡಿಲ್ಲ. ಒಂದನೇ ಸಂಸ್ಮರಣಾ ದಿನದಂಗವಾಗಿ ಇಂದು ಕಾರ್ಯಕ್ರಮಗಳನ್ನು ಆಜಿಸಲಾಗಿದೆ.