ಮೂಡುಬಿದಿರೆ, ಫೆ 17 (Daijiworld News/MB) : ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಶ್ರೀನಿವಾಸ್ ಗೌಡ ಹಾಗೂ ಮತ್ತವರ ತಂಡ ಅವರು ಮುಖ್ಯಮಂತ್ರಿ ಆಹ್ವಾನದ ಮೇರೆಗೆ ಬೆಂಗಳೂರಿಗೆ ಹೊರಟ್ಟಿದ್ದಾರೆ.
ಶ್ರೀನಿವಾಸ ಗೌಡ ಅವರಿಗೆ ಕ್ರೀಡಾ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಲಿದ್ದಾರೆ.
ಶ್ರೀನಿವಾಸ್ ಗೌಡ ಅವರೊಂದಿಗೆ ವಾರ್ತಾ ಇಲಾಖೆಯ ಅರುಣಕಾಂತ, ವರದಿಗಾರ ನಾಗರಾಜ, ಕೆ.ಗೋಪಾಲನ್ ಕಡಬ, ಹರ್ಷವರ್ಧನ್ ಪಡಿವಾಳ, ಶಕ್ತಿ ಪ್ರಸಾಸ್ ಶೆಟ್ಟಿ, ರಶ್ಮಿತ್ ಶೆಟ್ಟಿ, ಪ್ರದೀಪ್ ಚಂದ್ರ ಜೈನ್, ಸಚಿನ್ ಅಡಪ, ರಾಜೇಶ್ ಮಾರ್ನಾಡ್, ಯತೀಶ್ ಶೆಟ್ಟಿ, ದಿನೇಶ್ ಕೋಟ್ಯಾನ್, ಮನ್ಮಥ ಕೆಲ್ಲ, ಬಿ.ಸಿ. ರಮೇಶ್, ರಕ್ಷಿತ್ ಜೈನ್, ಜಿವಿತೇಶ್ ಕಡಂಬ ಇದ್ದರು.
ಈಗಾಗಲೇ ಕೇಂದ್ರ ಕ್ರೀಡಾ ಸಚಿವ ಕಿರಣ ರಿಜಿಜು ಅವರು ಶ್ರೀನಿವಾಸ ಗೌಡ ಅವರನ್ನು ಒಲಿಂಪಿಕ್ಸ್ಗೆ ಕಳುಹಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ಶ್ರೀನಿವಾಸ ಗೌಡ ಅವರು ಇದನ್ನು ತಿರಸ್ಕರಿಸಿದ್ದು "ನಾನು ಕಂಬಳದ ಕಾರಣದಿಂದಾಗಿ ಖ್ಯಾತಿ ಗಳಿಸಿರುವುದು ನನಗೆ ಸಂತೋಷವಾಗಿದೆ. ಆ ಕಾರಣಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಸೋಮವಾರ ನಡೆಯಲಿರುವ ಸಾಯ್ ಟ್ರಯಲ್ನಲ್ಲಿ ನಾನು ಭಾಗಿಯಾಗುವುದಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಹ್ವಾನದಂತೆ ನಾನು ಅವರನ್ನು ಸೋಮವಾರ ಭೇಟಿಯಾಗುತ್ತೇನೆ. ಕಂಬಳದಲ್ಲಿ ಹಿಮ್ಮಡಿ ಪ್ರಮುಖ ಪಾತ್ರ ವಹಿಸುತ್ತದೆ. ಟ್ರಾಕ್ ಓಟದಲ್ಲಿ ಕಾಲ್ಬೆರಳುಗಳು ಪ್ರಮುಖ ಪಾತ್ರ ವಹಿಸುತ್ತದೆ. ಕಂಬಳದಲ್ಲಿ ಓಟಗಾರನಂತೆ ಕೋಣಗಳಿಗೂ ಪ್ರಮುಖ ಪಾತ್ರವಿರುತ್ತದೆ. ಆದರೆ ಟ್ರಾಕ್ ಓಟದಲ್ಲಿ ಈ ರೀತಿಯಿಲ್ಲ" ಎಂದು ಅವರು ತಿಳಿಸಿದ್ದಾರೆ.