ಕುಂದಾಪುರ, ಫೆ 17 (DaijiworldNews/SM): ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡ ಘಟನೆ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ವಕ್ವಾಡಿ ಗ್ರಾಮದ ಜನತಾ ಕಾಲೋನಿ ಸಬ್ರಿನ್ ಮಂಜಿಲ್ ನಿವಾಸಿ ಮೊಹಮ್ಮದ್ ಹನೀಫ್(45) ಹಾಗೂ ವಕ್ವಾಡಿ ಜನತಾ ಕಾಲೋನಿ ರೆಹಮತ್ ಮಂಜಿಲ್ ನಿವಾಸಿ ಅಶ್ರಫ್(29) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಭಾನುವಾರ ರಾತ್ರಿ ಉಡುಪಿಯ ಡಿಸಿಐಬಿ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ತಂಡದ ನೇತೃತ್ವದಲ್ಲಿ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ಜೊತೆಗೆ ಮಾರಾಟಕ್ಕೆ ತಂದಿದ್ದ ೬೦೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.