ಬೆಳ್ತಂಗಡಿ, ಫೆ.17 (DaijiworldNews/PY): ಇಂದಬೆಟ್ಟು ಗ್ರಾಮದ ಪಡಂಬಿಲ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಮೃತಪಟ್ಟವರನ್ನು ನಡ ಗ್ರಾಮದ ಜೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಹಾಗೂ ನಡಬೈಲು ದರ್ಖಾಸು ನಿವಾಸಿ ಸಾಜಿದಾಬಿ ಎಂದು ಗುರುತಿಸಲಾಗಿದೆ.
ರಿಕ್ಷಾದಲ್ಲಿದ್ದ ಮಮ್ತಾಜ್ (30) ಹಾಗೂ ಶೈನಾಝ್ (29) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಕ್ಷಾ ಚಾಲಕ ನವೀದ್ ಎಂಬವರು ಗಾಯಗೊಂಡಿದ್ದು, ಅವರು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.