ಬಂಟ್ವಾಳ, ಫೆ 18 (Daijiworld News/MB) : ಸ್ವಾತಂತ್ರ್ಯ ನಂತರದಲ್ಲಿ ಹೇಳಿದ ಇತಿಹಾಸ ಸುಳ್ಳು ಮತ್ತು ಪೊಳ್ಳಿನಿಂದ ಕೂಡಿದ್ದು, ಮುಂದಿನ ತಲೆಮಾರಿಗಾದರೂ ಸತ್ಯ ಇಳಿಸುವ ಕೆಲಸ ಆಗಬೇಕು ಎಂದು ಕಲಾವಿದೆ, ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆ ಮಾಳವಿಕಾ ಅವಿನಾಶ್ ಅಭಿಪ್ರಾಯಪಟ್ಟರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ "ಸಶಕ್ತ ವೇದಿಕೆಯಲ್ಲಿದ್ದರು. ಭಾರತಕ್ಕೆ ಸದೃಢ ಹೆಜ್ಜೆಗಳು" ಎಂಬ ವಿಚಾರದ ರಾಷ್ಟ್ರಮಟ್ಟದ ವಿಚಾರಸಂಕಿರಣ ವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಎಡಪಂಥೀಯರ ಹಾಗೂ ನೆಹರೂ ಹೇಳಿದ ಇತಿಹಾಸ ನಮಗೆ ಬೇಡ ಎಂದು ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದ ಅವರು ಇದರ ಜೊತೆಯಲ್ಲಿ ನವಭಾರತದ ಪುನರ್ ನಿರ್ಮಾಣದ ಕೆಲಸ ಆಗಬೇಕಿದೆ ಎಂದರು. ಶಾಲೆಯ ಎಲ್ಲಾ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಸ್ವಾಭಿಮಾನ ವನ್ನೇ ಮೂಲಮಂತ್ರವನ್ನಾಗಿಸಿಕೊಂಡು ಹುಟ್ಟಿದ ಶಾಲೆ ಇದು ಆದ್ದರಿಂದ ನನಗೆ ಈ ಶಾಲೆಯಲ್ಲಿ ದಾರ್ಶನಿಕ ಅನುಭವ ವಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿಚಾರಸಂಕಿರಣದ ಅಗತ್ಯ ಮತ್ತು ಅನಿವಾರ್ಯತೆ ಕುರಿತು ವಿವರಿಸಿದರು. ಒಂದು ಕಾಲದಲ್ಲಿ ಮೆಳೈಸಿದ್ದ ಭಾರತ ಶತಮಾನಗಳಿಂದ ಸೋಲು, ಸಾಲ, ಅಪಮಾನಗಳಿಂದ ನೊಂದುಕೊಂಡಿದೆ. ಇದರಿಂದಭಾರತ ಅಂತಃಸತ್ವ ಕಳೆದುಕೊಂಡು ವಿಶ್ವದ ಇತರ ದೇಶಗಳ ಎದುರು ಕೈ ಚಾಚಬೇಕಾದ ಸ್ಥಿತಿ ಎದುರಾಗಿದೆ, ಇಂತಹಾ ಕಾಲಘಟ್ಟದಲ್ಲಿ ಜಾಗೃತಿಗಾಗಿ ಇಂತಹಾ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು. ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ವಸಂತ ಮಾಧವ, ಬೆಂಗಳೂರಿನ ಆರೋಹಿ ರಿಸರ್ಚ್ ಫೌಂಡೇಶನ್ ನ ನಿರ್ದೇಶಕ ಎಂ.ಎಸ್.ಚೈತ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್ ಕುಮಾರ್ , ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ವೇದಿಕೆಯಲ್ಲಿದ್ದರು. ಡಾ.ಪಿ.ಎಲ್ ಧರ್ಮ, ಎನ್.ರಮೇಶ್ ಹಾಗೂ ಸುನಿಲ್ ಕುಲಕರ್ಣಿ ಸಂವಾದಕರಾಗಿ ಭಾಗವಹಿಸಿದರು. ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ಯತಿರಾಜ್ ಕಾರ್ಯಕ್ರಮ ನಿರ್ವಹಿಸಿ , ವಂದಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಘಟನೆಗಳ ಸುತ್ತಮುತ್ತ- ಮಾಳವಿಕಾ ಅವಿನಾಶ್
ಭಾರತಕ್ಕೆ ಅಕ್ರಮವಾಗಿ ನುಸುಳಿಕೊಂಡು ಬಂದವರನ್ನು ವಾಪಾಸು ಕಳಿಸುವ ಉದ್ದೇಶದಿಂದ ಸಿಎಎ ಕಾಯ್ದೆ ಜಾರಿಗೊಳಿಸಲಾಗಿದ್ದು, ಇದರಿಂದ ಯಾವುದೇ ಭಾರತೀಯರಿಗೂ ಸಮಸ್ಯೆ ಇಲ್ಲ ಎಂದು ಮಾಳವಿಕಾ ಅವಿನಾಶ್ ಅಭಿಪ್ರಾಯಪಟ್ಟರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದೆ, ಅದರೆ ಹಿಂಸಾಚಾರದ ಪ್ರತಿಭಟನೆಗೆ ಸಂಚು ನಡೆದಿದ್ದು ಆ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆದಿದೆ. ಇದರ ಹಿಂದೆ ಕ್ರಾಂಗ್ರೇಸ್ ನ ಪಾಲೂ ಇದೆ ಎಂದು ಅವರು ಹೇಳಿದರು.
ದೇಶದ ಸೌರ್ವಭಾಮತ್ವವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿಗೆ ಬಂದಿದೆ ಎಂದು ಮಾಳವಿಕ ಅವಿನಾಶ್ ಹೇಳಿದರು.
ಸಶಕ್ತ ಭಾರತ, ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರ - ಬಿ.ಎಲ್.ಸಂತೋಷ್
ಎಲ್ಲರಿಗೂ ಮನೆ, ಮನೆಗೊಂದು ಶೌಚಾಲಯ, ಗ್ಯಾಸ್ ಸಂಪರ್ಕ, ವಿದ್ಯುತ್, ಇಂಟರ್ ನೆಟ್ ನಂತಹ ಮೂಲಭೂತ ಅಗತ್ಯ ಒದಗಿಸುವ ಪಂಚ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.ದೇಶದಲ್ಲಿ ಆರ್ಥಿಕ ಸ್ಥಿತಿಯನ್ನು ಸಧೃಡಗಿಳಿಸುವ ಕಾರ್ಯ ನಡೆಯುತ್ತಿದೆ, ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ "ಗಿವ್ ಇಟ್ ಅಪ್" ಯೋಜನೆಯೇ ಇದಕ್ಕೆ ಸಾಕ್ಷಿ ಎಂದರು. ಮತ ಬ್ಯಾಂಕ್ನ ಭಯದಿಂದ ಪಾಕಿಸ್ಥಾನದೊಂದಿಗೆ ಯುದ್ಧ ಇರಲಿಲ್ಲ. ಇದೀಗ ನಿರ್ಣಾಯಕ ನೇತೃತ್ವ ಮತ್ತು ಉಚ್ಛಮಟ್ಟದ ನಿರ್ವಹಣೆ ನಮ್ಮಲ್ಲಿದೆ ಹಾಗಾಗಿ ಗೆಲುವಿನಲ್ಲಿ ಬೀಗುತ್ತಿದ್ದೇವೆ.
ಜನಸಂಖ್ಯೆ ಲಾಭವೇ, ಅಪಾಯವೇ.? - ಎಂ.ಎಸ್.ಚೈತ್ರ
ಜನಸಂಖ್ಯೆ ಏರಿಕೆ - ಇಳಿಕೆಯ ಕುರಿತಾಗಿ ಗಂಭೀರ ಯೋಚನೆಗಳುನಡೆಯದೇ ಇದ್ದಲ್ಲಿ ಭಾರತದ ಸ್ಥಿತಿಯೂ ಯುರೋಫ್ ನಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಚಿಂತಕ, ವಿಮರ್ಶಕ ಮತ್ತಿಘಟ್ಟ ಚೈತ್ರ ಹೇಳಿದರು. ಪ್ರಸ್ತುತ ಸ್ಥಿತಿಯಲ್ಲಿ ಯುರೋಪ್ ನಲ್ಲಿವಯಸ್ಸಾದವರ ಸಂಖ್ಯೆಯೇ ಅಧಿಕವಾಗಿದ್ದು, ಯಂಗರ್ ಪಾಪ್ಯುಲೇಶನ್ ಇಲ್ಲ ಎನ್ನುವ ಸ್ಥಿತಿಯಲ್ಲಿದೆ. ಇಂತಹಾ ಬೆಳವಣಿಗೆ ಆ ದೇಶದ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಭಾರತಕ್ಕೆ ಈ ಅಪಾಯ ಬಾರದಿರಲಿ ಎಂದರು. ಕಾನೂನು, ಹೊಡೆದಾಟದ ಮೂಲಕ ಜನಸಂಖ್ಯೆ ಸಮಸ್ಯೆಗೆ ಪರಿಹಾರ ಅಸಾಧ್ಯ, ಸಾಂಸ್ಕೃತಿಕ ಅಂತಃಸತ್ವವನ್ನು ಹೇಗೆ ಕಟ್ಟಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕು ಎಂದರು.
ಬೌದ್ಧಿಕ ದಾಸ್ಯ ಮೇಲೇಳುತ್ತಿದೆಯೇ..? - ಡಾ.ಬಿ.ವಿ.ವಸಂತ ಕುಮಾರ್
ಬೌದ್ಧಿಕ ದಾಸ್ಯದಿಂದ ಭಾರತ ನಲುಗಿದೆ ಎಂದು ಸಮಾರೋಪ ಭಾಷಣದಲ್ಲಿ ಹೇಳಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಮತ ಮತ್ತು ಧರ್ಮ ಒಂದೇ ಅಲ್ಲ ಎಂದು ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಹೇಳಿದ್ದನ್ನು ಅಂದು ನಮ್ಮನ್ನಾಳಿದ ನಾಯಕರು ಅರ್ಥ ಮಾಡಿಕೊಂಡಿದ್ದರೆ, ಇಂದು ಈ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದರು. ಅಂದಿನ ಕಾಂಗ್ರೇಸ್ ಬೌದ್ಧಿಕ ದಾಸ್ಯಕ್ಕೆ ಒಳಗಾದುದೇ ಇಂದಿನ ಕಾಂಗ್ರೇಸ್ ನ ದುಸ್ಥಿತಿಗೆ ಕಾರಣ ಎಂದ ಅವರು, ರಾಮನನ್ನು ಹೀನಾಯವಾಗಿ ಸೋಲಿಸುವ ಬೌದ್ಧಿಕ ದಾಸ್ಯ ಸೋತಿದೆ, ರಾಮ ಈ ದೇಶದ ಅತ್ಮ ಎಂದ ಆತ್ಮ ಗೆದ್ದಿದೆ ಎಂದರು. ಪ್ರಸ್ತುತ ಆಡಳಿತದಲ್ಲಿ ದೇಶ ಬೌದ್ಧಿಕ ದಾಸ್ಯದಿಂದ ಬಿಡುಗಡೆಗೊಳ್ಳುತ್ತಿದ್ದು, ಸಾಮಾಜಿಕ ಚಿಂತನೆಯ ಜೊತೆಗೆ ದೇಶಾಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.