ಪುತ್ತೂರು, ಫೆ.19 (DaijiworldNews/PY): ಹೋಮ್ ಪ್ರೊಡಕ್ಟ್ ವ್ಯವಹಾರಕ್ಕೆ ಸಂಬಂಧಿಸಿ ಹಾಗೂ ಕುಟುಂಬದ ಆಸ್ತಿ ವಿಚಾರವಾಗಿ ಉಂಟಾದ ಮನಸ್ತಾಪದಿಂದಾಗಿ ಜಯರಾಮ ಎಂಬವರನ್ನು ಕೊಲೆ ಮಾಡಲು ಸಂಚು ನಡೆಸಿದ್ದ ಹಿನ್ನೆಲೆ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಕುರಿಯ ಗ್ರಾಮದ ನಿವಾಸಿ ಜಯರಾಮ (34 ವರ್ಷ) ಎಂಬುವವರು ಅವರ ಸಹೋದರ ಮಹೇಶ್ ಯಾನೆ ಮಾಯಿಲಪ್ಪ ಎಂಬವರೊಂದಿಗೆ ಸೇರಿ ನಡೆಸುತ್ತಿದ್ದ ಹೋಮ್ ಪ್ರೊಡಕ್ಟ್ ವ್ಯವಹಾರಕ್ಕೆ ಸಂಬಂಧಿಸಿ ಅವರೊಳಗೆ ಉಂಟಾಗಿದ್ದ ವೈಮನಸ್ಸಿನಿಂದ ಹಾಗೂ ಕುಟುಂಬದ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾಗಿ ಮಹೇಶ್ ಯಾನೆ ಮಾಯಿಲಪ್ಪ ಅವರು ಜಯರಾಮ ಎಂಬವರನ್ನು ನಾಸೀರ್ ಯಾನೆ ಮುನ್ನಿ ಎಂಬವನೊಂದಿಗೆ ಸೇರಿ ಕೊಲೆ ಮಾಡಲು ಸಂಚು ನಡೆಸಿದ್ದಾರೆ.
ಹಾಗೆಯೇ ಪುತ್ತೂರು ವೀರಮಂಗಲದ ನಿವಾಸಿ ಮಹಮ್ಮದ್ ಹಾರೀಶ್ನ ಮುಖಾಂತರ ಜಯರಾಮ ಎಂಬವರನ್ನು ಕೊಲೆ ಮಾಡಲು ಪ್ರೇರೇಪಣೆ ನೀಡಿರುವುದಾಗಿ ಫೆ.18 ಮಂಗಳವಾರದಂದು ಜಯರಾಮ ಅವರು ದೂರು ನೀಡಿದ್ದಾರೆ.
ಈ ಕುರಿತಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.