ಉಡುಪಿ, ಫೆ 19 (DaijiworldNews/SM): ಇಲ್ಲಿನ ಮಲ್ಪೆ ಮೂಲದ ಸುನಿಲ್ ಡಿಸೋಜಾ ಎಂಬುವವರು ಹಲವಾರು ವರ್ಷಗಳಿಂದ ಮೀನಿನ ವ್ಯವಹಾರ ನಡೆಸಿಕೊಂಡು ಬಂದಿದ್ದು, ಉಡುಪಿಯ ವಿಕಾಸ್ ಭಟ್ ರವರು ಈ ವ್ಯವಹಾರದಲ್ಲಿ ಲಕ್ಷಗಟ್ಟಲೆ ಹಣ ವಂಚನೆ ಮಾಡಿದ್ದಾರೆ ಎಂದು ಮಲ್ಪೆ ಪೋಲೀಸ್ ಠಾಣೆಯಲ್ಲಿ ಫೆಬ್ರವರಿ 15ಕ್ಕೆ ಪ್ರಕರಣ ದಾಖಲು ಮಾಡಿದ್ದಾರೆ.
ಈ ಮೊದಲು ಸುನಿಲ್ ಮಲ್ಪೆ ಯಲ್ಲಿ ಎಮ್ ಜೆ ಎಫ್ ಎಂಬ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಪೀಟರ್ ಕರ್ನೇಲಿಯೋ ಮತ್ತು ಫೆಲಿಕ್ಸ್ ಎಂಬುವವರೂ ಕೂಡ ಸುನಿಲ್ ಅವರು ಸೇರಿ ಪಾಲುದಾರರಾಗಿದ್ದರು. 2017ರಲ್ಲಿ ಕಾಂಬರ್ಟ್ ಇಂಡಸ್ಟ್ರೀಸ್ ಎಂಬ ಪಿಶರಿಸ್ ಸಂಸ್ಥೆಯೊಂದಿಗೆ ಉದ್ಯಮವನ್ನು ಪ್ರಾರಂಭಿಸಿರುತ್ತಾರೆ. 2018ರಿಂದ ವಿಕಾಸ್ ಭಟ್ ಒಟ್ಟು ಬೆಲೆಯ ಸುಮಾರು 23,71, 950 ರೂ ಮೌಲ್ಯದ ಮೀನನ್ನು ನೀಡಿದ್ದು ಯಾವುದೇ ಹಣ ನೀಡಿಲ್ಲ.
ಡಿಸೆಂಬರ್ 24ರಂದು 2,50, 000 ರೂಪಾಯಿಗಳನ್ನು ಸುನಿಲ್ ಅವರಿಗೆ ನೀಡಿದ ಚೆಕ್ ಬೌನ್ಸ್ ಆಗಿ, ತಾವು ಹಣದ ವಿಚಾರದಲ್ಲಿ ಮೋಸ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಪ್ರಸ್ತುತ ದಿಲ್ಲಿಯಲ್ಲಿರುವ ವಿಕಾಸ್ ಕರೆ ಮಾಡಿ ಬೆದರಿಕೆ ಕರೆ ಮಾಡುತ್ತಾನಂತೆ. ಅಲ್ಲಿಯೇ ಇದ್ದುಕೊಂಡು ಮಲ್ಪೆಯಲ್ಲಿರುವ ಸುನಿಲ್ ಮತ್ತು ಸುರೇಶ್ ಅವರ ವಿರುದ್ದವೇ ಮತ್ತೆ ಕೇಸು ದಾಖಲಿಸಿದ್ದಾನೆ.
ವಿಕಾಸ್ ಭಟ್ ಇದೇ ರೀತಿ ಅಸ್ಸಾಂ ಮೂಲದ ಬಡ ಕಾರ್ಮಿಕರಿಗೆ, ಮೀನು ವ್ಯಾಪಾರಸ್ಥರಿಗೆ ಕೋಟಿಗಟ್ಟಲೆ ಹಣದ ವಿಷಯವಾಗಿ ಮೋಸ ಮಾಡಿದ್ದಾನೆ ಎನ್ನುವುದು ಸುನಿಲ್ ಅವರ ವಾದ. ಕಾಪು, ಮಲ್ಪೆ, ಹೀಗೆ ಬೇರೆ ಬೇರೆ ರಾಜ್ಯದಲ್ಲಿ ಹಣದ ಅವ್ಯವಹಾರ ಮತ್ತು ಚೆಕ್ ಬೌನ್ಸ್ ವಿಷಯವಾಗಿ ಕೇಸು ದಾಖಲಾಗಿರುತ್ತದೆ.
2017ರಲ್ಲಿ ಪ್ರಥಮವಾಗಿ ವ್ಯವಹಾರ ನಡೆಸಿದಾಗ ಚೆಕ್ ಬೌನ್ಸ್ ಆಗಿದ್ದು ವ್ಯಾಪಾರ ಮುಂದುವರಿಸಿದ್ದರು. ಪೀಟರ್ ಕರ್ನೇಲಿಯೋ ಮತ್ತು ಫೆಲಿಕ್ಸ್ ಎಂಬುವವರೂ ಕೂಡ ಇದರೊಂದಿಗೆ ಕೈ ಜೋಡಿಸಿದ್ದಾರೆ. ಆದರೆ ಇತ್ತೀಚೆಗೆ ವಿಕಾಸ್ ಭಟ್ ಮೇಲಿರುವ ಚೀಟಿಂಗ್ ಕೇಸುಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ನಮಗಾದ ಅನ್ಯಾಯ ಇನ್ಯಾರಿಗೂ ಆಗಬಾರದು, ತಕ್ಷಣ ಪೋಲೀಸರು ಆತನನ್ನು ಬಂಧಿಸಿ ಸರಿಯಾದ ಕೈಗೊಳ್ಳಬೇಕು ಎಂದು ಸುನಿಲ್ ಆಗ್ರಹಿಸಿದ್ದಾರೆ.