ಕಾಸರಗೋಡು, ಫೆ 19 (DaijiworldNews/SM): ಪ್ರಿಯಕರನ ಜೊತೆಗಿರಲು ತನ್ನ ಒಂದೂವರೆ ವರ್ಷದ ಮಗುವನ್ನೇ ಸಮುದ್ರ ತೀರದ ಕಗ್ಗಲ್ಲಿಗೆ ಎಸೆದು ಪಾಪಿ ತಾಯಿಯೊಬ್ಬಳು ಕೊಲೆಗೈದ ಹೃದಯ ವಿದ್ರಾವಕ ಘಟನೆಯೊಂದು ಕಣ್ಣೂರಿನಲ್ಲಿ ನಡೆದಿದೆ. ಕೃತ್ಯಕ್ಕೆ ಸಂಬಂಧಪಟ್ಟಂತೆ ಹಂತಕಿ ಶರಣ್ಯ(೨೪)ಳನ್ನು ಪೊಲೀಸರು ಬಂಧಿಸಿದ್ದಾರೆ.
ಮಗುವನ್ನು ಕೊಲೆಗೈದ ಬಳಿಕ ಆರೋಪವನ್ನು ಪತಿ ಪ್ರಣವ್ ರ ಮೇಲೆ ಹೊರಿಸಿ ತನ್ನ ಪ್ರಿಯಕತನ ಜೊತೆ ಬದುಕಲು ಈ ಸಂಚು ನಡೆಸಿದ್ದಾಗಿ ಶರಣ್ಯ ತಪ್ಪೊಪ್ಪಿಕೊಂಡಿದ್ದಾಳೆ. ಕಣ್ಣೂರು ತಯ್ಯಿಲ್ ತೀರದಲ್ಲಿ ಈ ಘಟನೆ ನಡೆದಿದೆ.
ಶರಣ್ಯಳು ತನ್ನ ಪುತ್ರ ಒಂದೂವರೆ ವರ್ಷದ ವಿಯಾನ್ ನನ್ನು ದಾರುಣವಾಗಿ ಕೊಲೆ ಮಾಡಿದ್ದಾಳೆ. ಸೋಮವಾರ ಮುಂಜಾನೆ ಈ ಕೃತ್ಯ ನಡೆಸಿದ್ದಳು. ರಾತ್ರಿ ಮಲಗಿದ್ದಲ್ಲಿಂದಲೇ ಮಗುವನ್ನು ಎತ್ತಿಕೊಂಡು ಮನೆಯ ಅಲ್ಪ ದೂರದಲ್ಲಿರುವ ಬಂಡೆಕಲ್ಲಿಗೆ ಎಸೆದಿದ್ದಾಳೆ. ಎಸೆತದಿಂದ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮಗು ಅಲ್ಲೇ ಮೃತಪಟ್ಟಿದೆ. ಮಗು ನಾಪತ್ತೆಯಾದ ಬಗ್ಗೆ ಶರಣ್ಯಳ ಪತಿ ಪ್ರಣವ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶರಣ್ಯ ಮತ್ತು ಪ್ರಣವ್ ನಡುವೆ ದಾಂಪತ್ಯ ವಿರಹ ಇರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇಬ್ಬರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಆದರೆ ತದ್ವಿರುದ್ದ ಉತ್ತರ ನೀಡುತ್ತಿದ್ದರು.
ಶರಣ್ಯಳ ಹೇಳಿಕೆಗಳು ಪೊಲೀಸರಿಗೆ ಹಲವು ಸಂಶಯಗಳನ್ನು ಹುಟ್ಟು ಹಾಕಲಾರಂಭಿಸಿತ್ತು. ಎರಡು ದಿನಗಳ ಕಾಲ ಪೊಲೀಸರು ಶರಣ್ಯಳನ್ನು ವಿಚಾರಣೆ ಗೊಳಪಡಿಸಿದ್ದರು. ಆದರೆ ಈಕೆ ಒಪ್ಪಲು ತಯಾರಾಗಿಲ್ಲ ಇದರಿಂದ ವೈಜ್ಞಾನಿಕ ಪರೀಕ್ಷೆ ನಡೆಸಿದಾಗ ಸಂಚು ಬಯಲಾಗಿದೆ. ಈಕೆಯ ಬಟ್ಟೆ ಬರೆಗಳನ್ನು ಫಾರೆನ್ಸಿಕ್ ತನಿಖೆಗೊಳಪಡಿಸಿದಾಗ ಅದರಲ್ಲಿ ಉಪ್ಪಿನಂಶ ಕಂಡು ಬಂದಿದೆ. ಇದನ್ನು ಪುರಾವೆಯಾಗಿತ್ತು ಹೆಚ್ಚಿನ ತನಿಖೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಮಗುವನ್ನು ಕೊಲೆಗೈಯ್ಯಲು ಸಂಚು ನಡೆಸಿದ್ದಳು. ತಂದೆ ಜೊತೆ ಮೀನುಗಾರಿಕೆಗೆ ತೆರಳುವ ಪತಿ ಪ್ರಣವ್ ದಿನಗಳು ಕಳೆದು ಮನೆಗೆ ಬರುತ್ತಿದ್ದರು. ಆದಿತ್ಯವಾರ ರಾತ್ರಿ ಪತಿ ಮನೆ ಯಲ್ಲಿದ್ದಾಗಲೇ ದಿನವೇ ಈಕೆ ಕೃತ್ಯ ನಡೆಸಿದ್ದಾಳೆ ತಡರಾತ್ರಿ ಮಗುವನ್ನು ಸಮುದ್ರ ತೀರಕ್ಕೆ ಕೊಂಡೊಯ್ದು ಎಸೆದು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಶರಣ್ಯಳಿಗೆ ಹದಿನೆಂಟು ವರ್ಷ ತುಂಬುತ್ತಲೇ ಈಕೆಯ ವಿವಾಹ ನಡೆದಿತ್ತು. ಸಾಮಾಜಿಕ ಜಾಲ ತಾಣ ಮೂಲಕ ಪರಿಚಯವಾದ ಪ್ರಣವ್ ನನ್ನು ಈಕೆ ಪ್ರೀತಿಸುತ್ತಿದ್ದಳು. ಅನ್ಯ ಜಾತಿಯವರಾದ್ದರಿಂದ ವಿವಾಹಕ್ಕೆ ಮನೆಯವರ ವಿರೋಧ ಇದ್ದರೂ ಹಠದಿಂದ ಪ್ರಣವ್ ನನ್ನೇ ವಿವಾಹವಾಗಿದ್ದಳು. ಆದರೆ ಕೆಲ ಸಮಯದಲ್ಲೇ ದಾಂಪತ್ಯದಲ್ಲಿ ಬಿರುಕು ಕಂಡುಬಂದಿತ್ತು.
ಆದರೆ ಒಂದೂವರೆ ವರ್ಷದ ಹಿಂದೆ ಎರಡೂ ಮನೆಯವರು ಮಾತುಕತೆ ನಡೆಸಿ ಇತ್ಯರ್ಥಕ್ಕೆ ಬರಲಾಗಿತ್ತು. ಈ ನಡುವೆ ಪ್ರಣವ್ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಈತನ್ಮಧ್ಯೆ ಇನ್ನೋರ್ವ ಯುವಕನನ್ನು ಈಕೆ ಪ್ರೀತಿಸತೊಡಗಿದ್ದಳು. ಕೊನೆಗೆ ಈ ಯುವಕನ ಜೊತೆಗೆ ಬದುಕುವ ತೀರ್ಮಾನಕ್ಕೆ ಬರುತ್ತಾಳೆ. ಆದರೆ ಮಗುವನ್ನು ಕೊಂದು ಪತಿ ಪ್ರಣವ್ ನ ಮೇಲೆ ಹೊರಿಸುವ ಕನಸು ಕಾಣುತ್ತಾಳೆ.
ಕೆಲ ಸಮಯದ ಬಳಿಕ ಶನಿವಾರದಂದು ಪ್ರಣವ್ ಮನೆಗೆ ತಲಪುತ್ತಾರೆ. ಒಂದೆರಡು ದಿನ ಪ್ರಣವ್ ಮನೆಯಲ್ಲೇ ತಂಗುವ ತೀರ್ಮಾನಕ್ಕೆ ಬಂದುದರಿಂದ ಆದಿತ್ಯವಾರ ರಾತ್ರಿಯೇ ಕೊಲೆಗೆ ಸಂಚು ನಡೆಸಿದ್ದಾಳೆ. ಮುಂಜಾನೆ ಮೂರು ಗಂಟೆಗೆ ಪ್ರಣವ್ ನ ಗಮನಕ್ಕೆ ಬಾರದೆ ಮಗುವನ್ನು ಎತ್ತಿಕೊಂಡು ಸಮುದ್ರ ತೀರಕ್ಕೆ ತೇರಲಿ ಬಂಡೆ ಕಲ್ಲಿಗೆ ಎಸೆದು ಕೊಲೆ ಮಾಡಿದ್ದಾಳೆ. ಈಕೆ ಒಬ್ಬಳೇ ಈ ಕೃತ್ಯ ನಡೆಸಿದ್ದು, ಪ್ರಿಯಕರ ಭಾಗಿಯಾಗಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.