ಮಂಗಳೂರು, ಫೆ 20 (Daijiworld News/MB) : ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ನನ್ನು ಗುರುತುಪತ್ತೆ ಪರೇಡ್ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
ಈಗಾಗಲೇ ೪೫ ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಸ್ಪೋಟಕ ಇರಿಸಿದ ಪ್ರಕರಣದ ತನಿಖಾಧಿಕಾರಿಗಳು ಸಂಗ್ರಹ ಮಾಡಿದ್ದಾರೆ. ಈ ಪೈಕಿ ೧೦ ಕ್ಕೂ ಅಧಿಕ ಪ್ರತ್ಯಕ್ಷದರ್ಶಿಗಳ ಎದುರು ಆರೋಪಿ ಆದಿತ್ಯರಾವ್ ಪರೇಡ್ ನಡೆಸಲು ಎಲ್ಲಾ ಸಿದ್ಧತೆ ನಡೆದಿದೆ.
ಪರೇಡ್ ನಡೆಸಲು ಮಂಗಳೂರು ತಹಶೀಲ್ದಾರ್ಗೆ ಪೊಲೀಸರು ಪತ್ರ ಬರೆದಿದ್ದು ತಹಶೀಲ್ದಾರ್ ಶೀಘ್ರದಲ್ಲೆ ಪ್ರಕ್ರಿಯೆ ಆರಂಭ ಮಾಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಈ ಪ್ರಕರಣದ ಆರೋಪಿ ಆದಿತ್ಯರಾವ್ ಮಂಗಳೂರು ಕಾರಾಗೃಹದಲ್ಲಿದ್ದಾನೆ.