ಮಂಗಳೂರು, ಫೆ 21 (DaijiworldNews/SM): ಜೀವನೋತ್ಸಹಕ್ಕೆ ಆರೋಗ್ಯ ಪೂರ್ಣ ತ್ವಚೆಯೇ ಲಕ್ಷಣ. ಮೈ ಮನಸ್ಸು ಶುದ್ಧವಾಗಿದ್ದರೆ ಆರೋಗ್ಯ ಪೂರ್ಣ ಸಮಾಜ ಸೃಷ್ಟಿಯಾಗುತ್ತದೆ. ಒತ್ತಡ ಜೀವನ ನಡೆಸದಿದ್ದರೆ ಆರೋಗ್ಯವಂತನಾಗಿ ಬೆಳೆಯಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಹೇಳಿದರು.
ಬೆಸೆಂಟ್ ಸಂಧ್ಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಮಂಗಳೂರು, ಬೆಸೆಂಟ್ ಸಂಧ್ಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿಸ್ತರಣಾ ಘಟಕ ಇದರ ಆಶ್ರಯದಲ್ಲಿ ಮತ್ತು ಯೆನಪೋಯ ವ್ಯೆದ್ಯಕೀಯ ಆಸ್ಪತ್ರೆ, ದೇರಳಕಟ್ಟೆ, ಪಾವೂರು ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಾವೂರು ಇದರ ಸಹಯೋಗದೊಂದಿಗೆ ಇನೋಳಿ ಪದವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ. ನಮ್ಮನ್ನು ನಾವು ಪ್ರೀತಿಸಿದರೆ ಚರ್ಮ ಸಂಭಂಧಿ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿದರು.
ಬೆಸೆಂಟ್ ಸಂಧ್ಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಮಂಗಳೂರು, ಬೆಸೆಂಟ್ ಸಂಧ್ಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಮತ್ತು ಯೆನಪೋಯ ವ್ಯೆದ್ಯಕೀಯ ಆಸ್ಪತ್ರೆ ದೇರಳಕಟ್ಟೆ, ಪಾವೂರು ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಾವೂರು ಇದರ ಸಹಯೋಗದೊಂದಿಗೆ ಉಚಿತ ಚರ್ಮ ರೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ನಗು ನಗುತ ಇದ್ದವನಿಗೆ ಮುಪ್ಪು ಬೇಗನೆ ಆವರಿಸುವುದಿಲ್ಲ.
ಸಮಾಜದ ಅರಿವು ನಮಗಿದ್ದರೆ, ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿರುತ್ತದೆ. ಯಾವುದೇ ತುರಿಕೆ ಇತ್ಯಾದಿ ಕಂಡು ಬಂದಲ್ಲಿ ಮೊದಲ ಹಂತದಲ್ಲಿ ಅಸಡ್ಡೆ ತೋರದೆ ವೈದ್ಯರಲ್ಲಿ ತೋರಿಸಿಕೊಳ್ಳಿ. ಪ್ರತಿಯೊಂದು ಚಿಕಿತ್ಸೆಗೂ ನಗರಕ್ಕೆ ಬರಲು ಕಷ್ಟ ಸಾಧ್ಯ. ಪ್ರತಿಯೊಂದು ಚಿಕಿತ್ಸೆಗೂ ನಗರಕ್ಕೆ ಬರಲು ಕಷ್ಟ ಸಾಧ್ಯ. ಇವರು ನಿಮ್ಮ ಸೇವೆಗೆ ಸದಾ ಸಿದ್ದರಿದ್ದರೆಂದು. ಅಭಿಪ್ರಾಯ ಪಟ್ಟು ಸಾರ್ವಜನಿಕರಲ್ಲಿ ಶಿಬಿರದ ಸದುಪಯೋಗ ಪಡೆದುಕೊಳಲು ಕಿವಿ ಮಾತು ಹೇಳಿದರು.
ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಭಟ್. ಎ, ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಶಂಕರಾನಂದ ಎನ್ .ಇನವಳ್ಳಿ ,ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನಿತಾ.ಬಿ, ವಿಸ್ತರಣಾ ಘಟಕದ ಸಂಚಾಲಕ ಗೋಪಾಲಕೃಷ್ಣ ರೆಡ್ಡಿ ರಿತ್ತಿ,
ಬೆಸೆಂಟ್ ಸಂಧ್ಯಾ ಕಾಲೇಜಿನ ರಾ.ಸೆ.ಯೋ ಶಿಬಿರಾಧಿಕಾರಿ ಗಣೇಶ್ ಪೈ ರಾ.ಸೆ.ಯೋ ವಿದ್ಯಾರ್ಥಿ ಕಾರ್ಯದರ್ಶಿ ಮಂಜುಲೇಶ್ ಕಿಣಿ.ಉಪಸ್ಥಿತರಿದ್ದರು.
ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರ ಗಣಪತಿ ಭಟ್ ಎಂ, ಸ್ವಾಗತಿಸಿ, ವಂದಿಸಿದರು.