ಮಂಗಳೂರು, ಫೆ.21 (DaijiworldNews/PY) : ವಿಧಾನಸಭೆಯಲ್ಲಿ ಮಂಗಳೂರು, ದಕ್ಷಿಣ ಕ್ಷೇತ್ರ ಶಾಸಕರಾದ ವೇದವ್ಯಾಸ ಕಾಮತ್ ಅವರ ಮಂಗಳೂರು ಗೋಲಿಬಾರ್ನ ಬಗೆಗಿನ ತದ್ವಿರುದ್ದ ಹೇಳಿಕೆಗೆ ಮಾಜಿ ಮೇಯರ್ ಕೆ. ಅಶ್ರಫ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು, ಮಂಗಳೂರು, ದಕ್ಷಿಣ ಕ್ಷೇತ್ರ ಶಾಸಕರಾದ ವೇದವ್ಯಾಸ ಕಾಮತ್ ಅವರು 2019 ಡಿಸೆಂಬರ್ 19ರಂದು ಸಿಎಎ ಮತ್ತು ಎನ್ಆರ್ಸಿ ಅನುಷ್ಠಾನವನ್ನು ವಿರೋಧಿಸಿ ಜರುಗಿದ ಉದ್ದೇಶಿತ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ನಡೆಸಿದ ಪ್ರಚೋದಿತ ಲಾಟಿ ಚಾರ್ಜ್ ಮತ್ತು ಗೋಲಿಬಾರ್ನಲ್ಲಿ ಮೃತಪಟ್ಟವರು, ಗಾಯಗೊಂಡವರು ಮತ್ತು ಪೊಲೀಸು ಪ್ರಕರಣಗಳಲ್ಲಿ ಅಪಾದಿತರನ್ನಾಗಿಸಿದ ಬಗ್ಗೆ ವಿಧಾನ ಸಭೆಯಲ್ಲಿ ಉಲ್ಲೇಖಿಸುವ ಸಂದರ್ಭದಲ್ಲಿ ತನಗೆ ಅಂದಿನ ಘಟನೆಯ ಬಗ್ಗೆ ಹತ್ತಿರದಿಂದ ಗಮನಿಸಿದ್ದೇನೆ, ಸಂಪೂರ್ಣ ಮಾಹಿತಿ ಇದೆ ಎಂದು ಹೇಲಿಕೆ ನೀಡಿರುತ್ತಾರೆ. ಅವರ ಹೇಳಿಕೆಯು ಸಂಪೂರ್ಣ ತದ್ವಿರುದ್ದವಾಗಿದೆ ಎಂದು ಅಶ್ರಫ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 2019 ಡಿಸೆಂಬರ್ 19ರಂದು ಬಹಳ ದೊಡ್ಡ ರೀತಿಯಲ್ಲಿ ಪ್ರತಿಭಟನೆ ಇದೆ. ಕೇಂದ್ರ ಸರ್ಕಾರ ಸಿಎಎಯನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಬೇಕು ಮತ್ತು ಒಂದು ಗಲಾಟೆ ಎಬ್ಬಿಸಬೇಕು ಎಂಬ ರೀತಿಯಲ್ಲಿ ವಾಟ್ಸ್ಯಾಪ್, ಫೇಸ್ಬುಕ್ನಲ್ಲಿ ಈ ರೀತಿಯ ಮಾಹಿತಿ ಹರಿದಾಡಲಿಕ್ಕೆ ಶುರುವಾಯಿತು. ಆಗ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್144ನ್ನು ಹಾಕಲಾಯಿತು. ಪೊಲೀಸು ಇಲಾಖೆ ಈ ಗಲಾಟೆಯನ್ನು ತಡೆಯಬೇಕು ಎಂದು ನಿರ್ಧರಿಸಿತು. ವಾಟ್ಸ್ಯಾಪ್ನಲ್ಲಿ ಹತ್ತು ಹಲವಾರು ವಿಡಿಯೋಗಳು ಬಂದಿದ್ದವು. ನರೇಂದ್ರ ಮೋದಿ ಅವರಿಗೆ ಇದರಿಂದ ಪಾಠ ಕಲಿಸಬೇಕು. ಬುದ್ದಿ ಕಲಿಬೇಕು. ತಾವೆಲ್ಲರೂ 19 ತಾರೀಕಿನ ಈ ಒಂದು ಪ್ರತಿಭಟನೆಗೆ ಬರಬೇಕು. ಇದರಲ್ಲಿ ಗಲಾಟೆಯನ್ನು ಎಬ್ಬಿಸಬೇಕು ಎಂದು ಹೇಳುವಂತಹ ಹಲವು ಮಾಹಿತಿಗಳು ವೀಡಿಯೋಗಳ ಮುಖಾಂತರ ಎಲ್ಲರಿಗೂ ದೊರಕಿದೆ. 19ನೇ ತಾರೀಕು ಮಧ್ಯಾಹ್ನ 1.30ರ ನಂತರ ಬೇರೆ ಬೇರೆ ಕಡೆಗಳಿಂದ ಪ್ರಾರಂಭ ಹಂತದಲ್ಲಿ ನೂರಾರು ಜನರಿರುವ ವ್ಯಕ್ತಿಗಳು ಕೊನೆಗೆ ಸಾವಿರಾರು ಮುಗಿಲಾಗಿ ವ್ಯಕ್ತಿಗಳು ಸೇರುವ ವಾತಾವರಣ ನಿ೦ರ್ಮಾಣಗೊಳ್ಳುತ್ತದೆ. ಪೊಲೀಸರು ಈ ಪ್ರತಭಟನೆಯನ್ನು ಮಾಡಬಾರದು 144 ಸೆಕ್ಷನ್ ಇರುವಾಗ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಬಾರದು ಅಂತಹ ಹೇಳುವಂತಹ ಮಾತು ಹತ್ತು ಹಲವು ಬಾರಿ ಮಾಡಿಕೊಂಡರು.
ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಾಗದ ಸಂದರ್ಭದಲ್ಲಿ ಮಾಜಿ ಮೇಯರ್ ಅಶ್ರಫ್ ಅವರನ್ನು ಘಟನಾ ಸ್ಥಳಕ್ಕೆ ಪೊಲೀಸರು ಕರೆಸಿ, ಪ್ರತಿಭಟನಾಕಾರರನ್ನು ಸಮಾಧಾನಿಸಲು ಮತ್ತು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಲು ಮಾತುಕತೆ ನಡೆಸಲು ಮುಂದಾದಾಗ ಅವರಿಗೂ ಕಲ್ಲು ಬಿದ್ದಿದೆ, ಅನ್ನುವ ರೀತಿಯಲ್ಲಿ ಹೇಳಿದ್ದಾರೆ. ಪೊಲೀಸರು ನನ್ನನ್ನು ಘಟನೆಯ ಅಂತಿಮ ಹಂತದಲ್ಲಿ ಕರೆದಿದ್ದಾರೆ ಆ ಸಂದರ್ಭದಲ್ಲಿ ಲಾಟಿ ಚಾರ್ಜ್, ಆಶ್ರುವಾಯು ಸಿಡಿತದಿಂದ ಗಾಯಗೊಂಡು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ನಾನು ಮಧ್ಯ ಪ್ರವೇಶಿಸುವ ಸಂದರ್ಭದಲ್ಲಿ ಪೊಲೀಸರು ಗಾಳಿಯಲ್ಲಿ ಮತ್ತು ನೆಲಕ್ಕೆ ಗುಂಡು ಹಾರಾಟ ನಡೆಸಲು ಆರಂಭಿಸಿ ಆಗಿತ್ತು. ವೇದವ್ಯಾಸ್ ಕಾಮತ್ ಅವರು ಮುಂದುವರೆದು ಪೊಲೀಸು ಇಲಾಖೆಯಲ್ಲಿನ ಮುಸ್ಲಿಮ್ ಅಧಿಕಾರಿಗಳಾದ ಅಮನುಲ್ಲಾ ಮತ್ತು ಶರೀಫ ಅವರನ್ನು ಕಳುಹಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಲು ಪ್ರಯತ್ನಿಸಲಾಯಿತು ಎಂದು ಹೇಳಿಕೆ ನೀಡಿರುತ್ತಾರೆ. ಇಂತಹ ಯಾವುದೇ ಪ್ರಯತ್ನ ಕೂಡಾ ನಡೆಯದೇ ಏಕಾಏಕಿ ಶಾಂತಾರಾಮ, ಶರೀಫ್ ಮತ್ತು ಇತರರು ಗೋಲಿಬಾರ್ ನಡೆಸಿರುತ್ತಾರೆ.
ಶಾಂತಿಯುತ ಪ್ರತಿಭಟನೆಯ ಬಗ್ಗೆ ಉಲ್ಲೇಖಿಸುತ್ತಾ ಟೆಂಪೋ ರಿಕ್ಷಾದಲ್ಲಿ ಕಲ್ಲುಗಳ ಪೂರೈಕೆ ಆಗಿದೆ ಎಂಬಿತ್ಯಾದಿಯಾಗಿ ಹೇಳಿಕೆ ನೀಡಿದ್ದಾರೆ. ಆಟೋ ರಿಕ್ಷಾದಲ್ಲಿ ಕಲ್ಲುಗಳು ಬಂದಿವೆ ಎನ್ನುವುದು ಪೊಲೀಸರು ರಚಿಸಿದ ವಿಡಿಯೋ ಕ್ಲಿಪ್ಗಳಾಗಿವೆ.
ಪೆಟ್ರೋಲ್ ಬಾಂಬ್ಗಳು 4 ದಿವಸದ ಹಿಂದೆ ತಯಾರಿಸಲಾಗಿತ್ತು ಎಂದು ಹೇಳಿಕೆ ನೀಡಿರುತ್ತಾರೆ. ಇದು ಸಂಪೂರ್ಣ ಸುಳ್ಳು ಮತ್ತು ನೂರಾರು ವಾಹನಗಳಿಗೆ ಕಲ್ಲು ಹೊಡೆಯಲಾಗಿದೆ ಅನ್ನುವುದು ವಾಸ್ತವಕ್ಕೆ ವಿರುದ್ದ ಹೇಳಿಕೆಗಳಾಗಿವೆ.
ಬಂದರ್ ಪೊಲೀಸ್ ಠಾಣೆಯು 4 ರಸ್ತೆಗಳಲ್ಲಿ 5 ರಿಂದ 6 ತಡೆಗೋಡೆ ಕಟ್ಟಲಾಗಿದೆ. ಅದಕ್ಕೆ 1 ದಿವಸ ಸಮಯವಾಕಾಶದಂತೆ ಹಿಂದೆಯೇ ನಿರ್ಮಿಸಲಾಗಿರುವಂತದ್ದು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ 4 ರಿಂದ 5 ತಡೆಗೋಡೆ ಪ್ರತಿ ಹತ್ತು ಮೀಟರ್ಗೊಂದು ತಡೆಗೋಡೆ ಇದೆ. ಟಯರ್ಗೆ ಬೆಂಕಿ ಹಾಕಿರುತ್ತಾರೆ ಮತ್ತು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪೂರ್ವಯೋಜಿತ ಕೃತದಯ ಅನ್ನುವುದು ತದ್ವಿರುದ್ದ ಹೇಳಿಕೆಗಳಾಗಿವೆ.
ಪ್ರತಿಭಟನಾಕಾರರು ಆಯುಧ ಅಂಗಡಿಗಳನ್ನು ಲೂಟಿ ಮಾಡಲು ಪ್ರಯತ್ನಿಸಿದ ಬಗ್ಗೆ ಅದರ ಮಾಲೀಕರು ಸೃಷ್ಠೀಕರಣ ನೀಡಿರುತ್ತಾರೆ. ವೇಸವ್ಯಾಸ ಕಾಮತ್ ಅವರ ಹೇಳಿಕೆ ಸರಿಯಿಲ್ಲ. ದಾರಿಯಲ್ಲಿ ಸಾವಿರಾರು ಮನೆಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ ಎಂಬುದರ ಬಗ್ಗೆ ವಿಡಿಯೋ ಕ್ಲಿಪ್ಗಳನ್ನು ಬಹಿರಂಗ ಪಡಿಸಲಿ. ಕೇರಳದಿಂದ ಪ್ರತಿಭಟನಾಕಾರರು ಮಂಗಳೂರಿಗೆ ಬಂದು ಪ್ರತಿಭಟನೆ ಮಾಡಿರುತ್ತಾರೆ ಎಂಬ ಬಗ್ಗೆ ವೇದವ್ಯಾಸ ಕಾಮತ್ ಅವರು ಪುರಾವೆ ಒದಗಿಸಲಿ. ವೇದವ್ಯಾಸ ಕಾಮತ್ ಅವರು ಸುಳ್ಳಿನ ಸರಮಾಲೆಯನ್ನೇ ಪವಿತ್ರ ಶಕ್ತಿ ಕೇಂದ್ರವಾದ ವಿಧಾನ ಸಭೆಯಲ್ಲಿ ಹೇಳಿರುವುದು ಅದನ್ನು ಅಪವಿತ್ರಗೊಳಿಸಿದಂತೆ ಆಗಿದೆ ಎಂದು ಅಶ್ರಫ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.