ಉಪ್ಪಿನಂಗಡಿ, ಫೆ 22 (Daijiworld News/MB) : ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ಮಂಗಳೂರು ಬೆಂಗಳೂರು ಹೆದ್ದಾರಿಯ ಕೂಟೇಲು ಎಂಬಲ್ಲಿ ಗುರುವಾರ ತಡರಾತ್ರಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಸೇತುವೆಯಿಂದ ಕೆಳಕ್ಕೆ ಬೀಳಲಿದ್ದ ಘಟನೆ ನಡೆದಿದ್ದು ಭಾರೀ ಅನಾಹುತ ತಪ್ಪಿದೆ.
ವಿಜಯಪುರದಿಂದ ಮಂಗಳೂರಿಗೆ ಪಾರ್ಸೆಲ್ ಹೇರಿಕೊಂಡು ಬರುತ್ತಿದ್ದ ಲಾರಿ ಕೂಟೇಲು ಸೇತುವೆಗೆ ಡಿಕ್ಕಿ ಹೊಡೆದು ಸೇತುವೆಯೊಂದ ಕೆಳಕ್ಕೆ ಬೀಳುವ ಹಂತದಲ್ಲಿ ಸೇತುವೆ ಬದಿಯಲ್ಲಿದ್ದ ಬಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅರ್ಧದಲ್ಲೇ ನಿಂತಿದೆ.
ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಗಿದ್ದಾನೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಇದರ ಸಂಪಕದಲ್ಲಿದ್ದ ವಿದ್ಯುತ್ ತಂತಿ ಕೂಡಾ ತುಂಡಾಗಿ ಬಿದ್ದಿದೆ. ಇದರಿಂದಾಗಿ ಸುಮಾರು 50 ಸಾವಿರ ರೂಪಾಯಿ ನಷ್ಟ ಉಂಟಾಗಿರುವುದಾಗಿ ಮೆಸ್ಕಾಂ ಎಂಜಿನಿಯರ್ ರಾಜೇಶ್ ತಿಳಿಸಿದ್ದಾರೆ.