ಉಪ್ಪಿನಂಗಡಿ, ಫೆ.22 (DaijiworldNews/PY): ಶಿರಾಡಿ ಗ್ರಾಮದ ಬಡ್ಚಿನ ಹೊಳೆಯಲ್ಲಿ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೊಳೆಗೆ ಹೋಗಿದ್ದ ಯುವಕನೋರ್ವ ಕಾಲು ಜಾರಿ ನೀರು ಪಾಲಾಗಿ ನಾಪತ್ತೆಯಾದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.
ನೀರುಪಾಲಾಗಿ ಮೃತಪಟ್ಟ ವ್ಯಕ್ತಿಯನ್ನು ಶಿರಾಡಿ ಗ್ರಾಮದ ಬಾಗಿಲಗದ್ದೆ ನಿವಾಸಿ ಹರೀಶ್ (26 ವರ್ಷ) ಎನ್ನಲಾಗಿದೆ.
ಫೆ.21 ಶುಕ್ರವಾರದಂದು ಹರೀಶ್ ಸ್ನೇಹಿತರೊಂದಿಗೆ ಗುಂಡ್ಯ ಹೊಳೆಗೆ ಮೀನು ಹಿಡಿಯಲು ಹೋಗಿದ್ದರು ಎನ್ನಲಾಗಿದೆ. ಮೀನು ಹಿಡಿದು ವಾಪಾಸಾಗುವ ಸಂದರ್ಭ ಕಾಲು ಜಾರಿ ನೀರು ಪಾಲಾಗಿದ್ದರು.
ನೆಲ್ಯಾಡಿ ಹೊರ ಠಾಣೆ ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿಗಳು ಹಾಗೂ ಸ್ಥಳಿಯರು ಹುಡುಕಾಟ ನಡೆಸಿದ ಸಂದರ್ಭ ಹರೀಶ್ ಅವರ ಮೃತ ದೇಹ ಪತ್ತೆಯಾಗಿದೆ.