ಉಪ್ಪಿನಂಗಡಿ,ಸೆ17:ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಕಡಬದ ನೂಜಿ ಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಮಧ್ಯದಂಗಡಿ ತೆರೆಯಲಾಗಿದ್ದು, ಬಾರ್ ಸ್ಥಳಾಂತರಕ್ಕೆ ಆಗ್ರಹಿಸಿ ಇಂದಿನಿಂದ ಗ್ರಾಮಸ್ಥರು ಅನಿರ್ದಿಷ್ಠಾವಧಿ ಮುಷ್ಕರ ನಡೆಸುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿ ಬಾಳ್ತಿಲ ಗ್ರಾಮ ಮಂಚಾಯತ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ನಡಿಯುತ್ತಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕಡಬದ ನೆಲ್ಯಾಡಿ ಹೆದ್ದಾರಿ ಬದಿಯಲ್ಲಿನ ಬಾರ್ ಅನ್ನು ನೂಜಿ ಬಾಡ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿಗೆ ಸ್ಥಳಾಂತರ ನಡೆಸೋದಕ್ಕೆ ವಿರೋಧ ವ್ಯಕ್ತ ಪಡಿಸಿದ ಗ್ರಾಮಸ್ಥರು ಕಳೆದ ಸೋಮವಾರ ಕಡಬ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಸ್ಥಳೀಯ ವಿರೋಧದ ನಡುವೆಯೂ ಸೋಮವಾರದಿಂದ ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ಕಾರ್ಯಚರಿತ್ತ ಇದೆ. ಇನ್ನು ಪ್ರಮುಖವಾಗಿ ಸರ್ಕಾರಿ ಜಮೀನಿನ ಅಕ್ರಮ ಕಟ್ಟಡದಲ್ಲಿ ಬಾರ್ ಕಾರ್ಯಾಚರಿಸುತ್ತಿದ್ದು ಬಾರ್ ಸ್ಥಳಾಂತರಕ್ಕೆ ಆಗ್ರಹಿಸಿ ಅನಿರ್ದಿಷ್ಠಾವಧಿ ಮುಷ್ಕರ ನಡಿಯುತ್ತಿದೆ.